ಬೆಂಗಳೂರು:- ತೆಲುಗಿನ ‘ಲಕ್ಕಿ ಭಾಸ್ಕರ್’ ಸಿನಿಮಾ ಕಥೆಯಂತೆ ಬ್ಯಾಂಕ್ಗೆ ಸೇರಿದ ಹಣವನ್ನೇ ದೋಚಿ ಯಾಮಾರಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಲಕ್ಕಿ ಭಾಸ್ಕರ್ ಸಿನಿಮಾಮಾದರಿಯಲ್ಲೇ ಬ್ಯಾಂಕ್ ಡೆಪ್ಯೂಟಿ ಮ್ಯಾನೆಜರ್ ರಿಂದ ವೃದ್ಧೆಗೆ ಈ ವಂಚನೆ ಮಾಡಲಾಗಿದೆ. ಬ್ಯಾಂಕ್ ಗೆ ಬಂದ ವೃದ್ಧೆ ಗ್ರಾಹಕಿಗೆ ಗಿರಿನಗರ ಇಂಡಸ್ ಇಂಡ್ ಬ್ಯಾಂಕ್ ಮ್ಯಾನೆಜರ್ ಮೇಘನಾ 50 ಲಕ್ಷ ದೋಖಾ ಮಾಡಿರುವ ಆರೋಪ ಕೇಳಿ ಬಂದಿದೆ. ಮೊದಲಿಗೆ ಎಫ್ ಡಿ ಅಕೌಂಟ್ ಮಾಡಿಕೊಡೋದಾಗಿ ಆರ್ ಟಿ ಜಿಎಸ್ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಬಳಿಕ ತಮ್ಮ ಹೊಸ ಬ್ಯಾಂಕ್ ಖಾತೆ ತೆಗೆದು 50 ಲಕ್ಷ ಆರ್ ಟಿ ಜಿಎಸ್ ಮಾಡಿ ಮೋಸ ಮಾಡಿದ್ದಾರೆ. ವೃದ್ಧೆ ಖಾತೆಯಿಂದ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡು ಮೇಘನಾ ವಂಚಿಸಿದ್ದಾರೆ. ಮೇಘನಾ, ಪತಿ ಶಿವಪ್ರಸಾದ್, ಸ್ನೇಹಿತ ವರದರಾಜು, ಮತ್ತು ವರದರಾಜು ಸ್ನೇಹಿತ ಅನ್ವರ್ ಘೋಷ್ ಸೇರಿ ವಂಚನೆ ಮಾಡಿದ್ದಾರೆ.
ಸಧ್ಯ ಗಿರಿನಗರ ಪೊಲೀಸರಿಂದ ಈ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಆರ್ ಡಿ ಜಿ ಎಸ್ ಮಾಡಿಕೊಂಡಿದ್ದ 50 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
ಹಾಗಾದ್ರೆ ಮೇಘನಾ ಹಾಗೂ ಪತಿ ಹೆಣೆದ ಬಲೆ ಎಂಥದ್ದು ಗೊತ್ತಾ?
ಗಿರಿನಗರ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ವೃದ್ಧ ದಂಪತಿ ಜಂಟಿ ಖಾತೆ ತೆರೆದಿದ್ದರು. ಅದೇ ಬ್ರಾಂಚ್ ನಲ್ಲಿ ಎಫ್ ಡಿ ಖಾತೆ ಕೂಡ ಹೊಂದಿದ್ದರು. ವೃದ್ಧೆಗೆ ಬ್ಯಾಂಕ್ ನಲ್ಲಿ ಡೆಪ್ಯೂಟಿ ಮ್ಯಾನೆಜರ್ ಮೇಘನಾ ಪರಿಚಯವಾಗಿದೆ. ವೃದ್ಧೆ ಬ್ಯಾಂಕ್ ವ್ಯವಹಾರದಲ್ಲಿ ಮೇಘನಾ ಸಹಾಯ ಮಾಡ್ತಿದ್ದರು. ಕುಟುಂಬದ ಎಲ್ಲಾ ವಿಚಾರವನ್ನು ಮೇಘನಾ ಜೊತೆ ವೃದ್ಧೆ ಹೇಳಿಕೊಳ್ತಿದ್ದರು. ಹಾಗೂ ಚಾಮರಾಜಪೇಟೆಯಲ್ಲಿ ಮನೆ ಮಾರಿರುವ ವಿಚಾರ ಕೂಡ ಹಂಚಿಕೊಂಡಿದ್ಳು. ಮನೆ ಮಾರಾಟದಿಂದ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆಯಾಗಿತ್ತು. ವೃದ್ಧೆ ಬ್ಯಾಂಕ್ ಗೆ ಹೋದಾಗ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಕಥೆ ಕಟ್ಟಿದ್ಳು.
ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದಿದ್ಳು. ಮನೆಗೆ ಬಂದು ಸಹಿ ಮಾಡಿದ ಎರಡು ಖಾಲಿ ಚೆಕ್ ಅನ್ನು ಮೇಘನಾ ಪಡೆದಿದ್ದರು. ಜೊತೆಗೆ ಒಂದಿಷ್ಟು ಕಾಗದ ಪತ್ರಗಳಿಗು ಸಹಿ ಪಡೆದಿದ್ಳು. ಎಫ್ ಡಿ ಬದಲಾಗಿ ಆರ್ ಟಿ ಜಿ ಎಸ್ ಪತ್ರಕ್ಕೆ ಸಹಿ ಪಡೆದಿದ್ದಳು ಚಾಲಾಕಿ ಮೇಘನಾ. ವೃದ್ಧ ದಂಪತಿ ಮಗ ಮೊಬೈಲ್ ಪರಿಶೀಲನೆ ವೇಳೆ ಕಡಿಮೆ ಹಣ ಇರೋದು ಪತ್ತೆಯಾಗಿದೆ. ಬಳಿಕ ಬ್ಯಾಂಕ್ ನಿಂದ ಬಂದ ಮೆಸೆಜ್ ಗಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಫೆಬ್ರವರಿ 13 ರಂದು ಬೇರೆ ಖಾತೆಗೆ ಹಣ ವರ್ಗಾವಣೆ ಆಗಿರೋದು ಗೊತ್ತಾಗಿದೆ. ಬ್ಯಾಂಕ್ ಗೆ ಹೋಗಿ ಮೇಘನಾಳಿಗೆ ವೃದ್ಧೆ ಪ್ರಶ್ನಿಸಿದ್ದಾರೆ.
ಈ ವೇಳೆ ನೀವು ಹೇಳಿದ ಖಾತೆಗೆ ಆರ್ ಟಿ ಜಿಎಸ್ ಮಾಡಲಾಗಿದೆ ಎಂದು ಉಲ್ಟಾ ಹೊಡೆದಿದ್ದಾರೆ. ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ವೃದ್ಧೆ ದೂರು ನೀಡಿದ್ದಾರೆ. ಬಳಿಕ ತನಿಖೆ ಕೈಗೊಂಡ ಪೊಲೀಸರು, ಮೇಘನಾಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಬಂಧನದ ಬಳಿಕ ಅಸಲಿ ಸತ್ಯ ರಿವೀಲ್ ಆಗಿದೆ.
ಮೇಘನಾ ಐಷಾರಾಮಿ ಜೀವನದ ಕನಸು ಕಂಡಿದ್ದರು. ಕಾರು ಖರೀದಿಸಿ ವೈಭೋಗದ ಲೈಫ್ ಲೀಡ್ ಮಾಡಬೇಕು ಅಂದುಕೊಂಡಿದ್ಳು. ಅದಕ್ಕಾಗಿ ಗಂಡ ಶಿವಪ್ರಸಾದ್ ಜೊತೆಗೆ ಸೇರಿ ಪ್ಲಾನ್ ಮಾಡಿದ್ದಾಳೆ. ಗೆಳೆಯ ವರದರಾಜು ಮತ್ತು ಅನ್ವರ್ ಘೋಷ್ ಗೆ ಹೇಳಿ ಹೊಸ ಬ್ಯಾಂಕ್ ಖಾತೆ ಓಪನ್ ಮಾಡಿದ್ದಾರೆ. ಆ ಖಾತೆಗೆ ಆರ್.ಟಿ ಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆಸಾಮಿ 30 ಲಕ್ಷ ಹಣ ವಿತ್ ಡ್ರಾ ಮಾಡಿಕೊಂಡಿದ್ದ. ತನಿಖೆ ನಡೆಸಿ ಒಟ್ಟು 50 ಲಕ್ಷ ಹಣ ವಶಕ್ಕೆ ಪಡೆದಿದ್ದರು ಪೊಲೀಸರು. ಪೊಲೀಸರ ವಿಚಾರಣೆ ವೇಳೆ ಲಕ್ಕಿ ಭಾಸ್ಕರ್ ಸಿನಿಮಾ ಕಥೆಯನ್ನು ಮೇಘನಾ ಹೇಳಿದ್ದಾರೆ. ನನಗೆ ವೃದ್ಧೆಗೆ ಮೋಸ ಮಾಡುವ ಉದ್ದೇಶ ಇರಲಿಲ್ಲ.
ನಮಗೆ ಹಣದ ಅವಶ್ಯಕತೆ ಇತ್ತು. ಆ ದುಡ್ಡಲ್ಲಿ ಲಾಭ ಗಳಿಸಿ ಮತ್ತೆ ವೃದ್ಧೆಗೆ ಕೊಡುವ ಪ್ಲಾನ್ ಇತ್ತು ಎಂದು ಕಥೆ ಕಟ್ಟಿದ್ದಾಳೆ.