ಬೆಳಗಾವಿ:- ಅಯ್ಯೋಧ ರಾಮಮಂದಿರ ಉದ್ಘಾಟನೆ ಶುಭಾಶಯ ಕೋರಿದ ಮರಾಠಿ ಬ್ಯಾನರ್ ಗಳನ್ನು ತೆರವು ಮಾಡಲಾಗಿದೆ.
ಪಾಲಿಕೆ ಅಧಿಕಾರಿಗಳಿಗೆ ಕನ್ನಡಪರ ಹೋರಾಟಗಾರರ ಮನವಿ ಮೇರೆಗೆ ತೆರವು ಮಾಡಲಾಗಿದೆ. ಬೆಳಗಾವಿ ಕಪಿಲೇಶ್ವರ ಮಂದಿರದ ಹತ್ತಿರ ಹಾಕಲಾಗಿದ್ದ ಮರಾಠಿ ಬ್ಯಾನರ್ ತೆರವು ಮಾಡಲಾಗಿದೆ.
ಎಂಇಎಸ್ ಮುಖಂಡ ರಮಾಕಾಂತ ಕೊಂಡುಸ್ಕರ್,ಸಾಗರ ಪಾಟೀಲ,ಕಪೀಲ್ ಬೋಸ್ಲೆ ಶುಭಾಶಯ ಕೋರಿದ ಬ್ಯಾನರ್ ಹಾಕಲಾಗಿತ್ತು. ಕರ್ನಾಟಕ ರಾಜ್ಯ ಸರಕಾರದ 60% ಕನ್ನಡ ಬಳಕೆ ಮಾಡದ ಹಿನ್ನಲೆ ತೆರವು ನಿನ್ನೆ ರಾತ್ರಿ ಪೋಲಿಸರ ಸಮ್ಮುಖದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳಿಂದ ತೆರವು ಮಾಡಲಾಗಿದೆ.