ಬೆಂಗಳೂರು:- ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರಿನ ಬಳಿ ಮಾನ ಮರ್ಯಾದಿಗೆ ಅಂಜಿ ತನ್ನ ಕತ್ತನ್ನ ತಾನೇ ಸೀಳಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಮೋಹನ್ ಕುಮಾರ್ ಎಂಬಾತ ಚಾಕುವೊಂದರಿಂದ ತನ್ನ ಕತ್ತನ್ನ ತಾನೇ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಮೃತಹಳ್ಳಿ ಠಾಣಾ ವ್ಯಾಪ್ತಿಯ ನಿವಾಸಿಯಾಗಿರೋ ಮೋಹನ್ ಕುಮಾರ್ ಪೇಂಟಿಂಗ್ ಕೆಲಸ ಮಾಡ್ಕೊಂಡಿದ್ದ. ಆತನ ಪತ್ನಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡ್ತಿದ್ದರು. ಆಗೋ ಹೀಗೋ ಕುಟುಂಬ ಚೆನ್ನಾಗಿಯೇ ನಡೀತಿತ್ತು. ಆದ್ರೆ ಇತ್ತೀಚೆಗೆ ಈತನ ಬಾಮೈದ ಮಾಡಿದ್ದ ಕೆಲಸ ಮೋಹನ್ ಕುಮಾರ್ ಗೆ ತಲೆ ತಗ್ಗಿಸುವಂತೆ ಮಾಡಿತ್ತು.
ವಿವಿ ಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಅರೆಸ್ಟ್ ಆಗಿದ್ದ. ಕಳ್ಳತನ ಮಾಡಿದ್ದವ ಇದೇ ಮೋಹನ್ ಕುಮಾರ್ ಮನೇಲಿ ಕದ್ದಿದ್ದ ಚಿನ್ನ ತಂದಿಟ್ಟಿದ್ದ. ತನಿಖೆ ನಡೆಸಿದ್ದ ವಿವಿ ಪುರಂ ಪೊಲೀಸರು ಮೋಹನ್ ಕುಮಾರ್ ಮನೆಯಲ್ಲಿ ಚಿನ್ನ ವಶಪಡೆದು ಕೇಸ್ ಸಂಬಂಧ ವಿಚಾರಣೆ ಕರೆದಿದ್ರು. ಆಗಾಗ ಠಾಣೆಗೆ ಓಡಾಡೋ ಪರಿಸ್ಥಿತಿ ಬಂದಿತ್ತು.
ಇದ್ರಿಂದ ಮೊದಲೇ ಮನ ನೊಂದಿದ್ದ ಮೋಹನ್ ಕುಮಾರ್ ಗೆ ಚಿನ್ನ ಕಳೆದು ಕೊಂಡಿದ್ದ ದೂರುದಾರ ಬೈತಿದ್ನಂತೆ. ನನ್ನ ಚಿನ್ನ ನಿಮ್ಮ ಮನೇಲಿ ಯಾಕಿಟ್ಕೊಂಡಿದ್ದೆ. ನಿನ್ನ ಬಾಮೈದನ ಜೊತೆ ಸೇರಿ ನೀನೂ ಕಳ್ಳತನ ಮಾಡಿದ್ಯಾ ಹಾಗೇ ಹೀಗೆ ಬೈತಿದ್ನಂತೆ. ಠಾಣೆ ಹತ್ತಿರ ಅಲ್ಲದೇ ಇತ್ತೀಚೆಗೆ ಅಮೃತಹಳ್ಳಿಯ ಮೋಹನ್ ಮನೆ ಬಳಿ ಬಂದು ಗಲಾಟೆ ಮಾಡಿ ಬೈದಿದ್ನಂತೆ. ಇದ್ರಿಂದ ತೀವ್ರ ಮನ ನೊಂದಿದ್ದ ಮೋಹನ್ ಕುಮಾರ್ ಮಾಡದ ತಪ್ಪಿಗೆ ಮಾನ ಹೋಯ್ತು ಅಂತಾ ಚಾಕು ಕೈ ಹಿಡ್ಕೊಂಡು ಖಾಲಿ ಸೈಟ್ ವೊಂದರ ಬಳಿ ಹೋದಾತ ಮರದ ಕೆಳಗಡೆ ಕುಳಿತು ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.