ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷ ಮಾಡಲು ಎಲ್ಲರು ಸಜ್ಜಾಗಿದ್ದರು, ಅವರದ್ದೇ ಆದ ಶೈಲಿಯಲ್ಲಿ ಪಾರ್ಟಿ ಮಾಡಲು ಕೂಡ ಜನ ರೆಡಿ ಇದ್ದರು ಆದರೆ ಇಲ್ಲೊಬ್ಬ ನ್ಯೂ ಇಯರ್ ಪಾರ್ಟಿ ಮಾಡಲು ಹಣಕ್ಕಾಗಿ ವ್ಯಕ್ತಿಯನ್ನೇ ಕಿಡ್ನಾಪ್ ಮಾಡಿ ಕೊಲೆ ಮಾಡರುವ ಘಟನೆ ನಡೆದಿದೆ.
ಗುರುಸಿದ್ದಪ್ಪ, ಕೊಲೆಯಾದ ವ್ಯಕ್ತಿಯಾಗಿದ್ದು ಸಂಜಯ್ ,ಆನಂದ್ ಎಂಬುವರಿಂದ ಕೊಲೆಯಾಗಿದ್ದು ಇದೀಗ ಜ್ಞಾನ ಭಾರತಿ ಠಾಣೆ ಪೊಲೀಸರಿಂದ ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳಿಗೆ ಪರಿಚಿತನಾಗಿದ್ದ ಗುರು ಸಿದ್ದಪ್ಪ ಡಿಸೆಂಬರ್ 30 ರಂದು ಕಿಡ್ನಾಫ್ ಮಾಡಿ ಗುರುಸಿದ್ದಪ್ಪನ ಹೆಂಡತಿಯಿಂದ ಐದು ಲಕ್ಷ ಪಡೆದಿದ್ದರು ನಂತರ ಗುರು ಸಿದ್ದಪ್ಪ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹಲ್ಲೆ ಮಾಡಿ ಕೊಲೆ ಮಾಡಿದ್ದ ಆರೋಪಿಗಳು ಆ ನಂತರ ನ್ಯೂ ಇಯರ್ ಪಾರ್ಟಿ ಮಾಡಲು ಗೋವಾಗೆ ಹೋಗಿದ್ದ ಆರೋಪಿಗಳು.