ಬೆಂಗಳೂರು: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಂದ್ರಪ್ಪ(44) ಮೃತ ವ್ಯಕ್ತಿ. ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಂದ್ರಪ್ಪ ಮಲಗಿದ್ದ. ಇಬ್ಬರು ವ್ಯಕ್ತಿಗಳು ಚಂದ್ರಪ್ಪ ಮೊಬೈಲ್ ಕಿತ್ತುಕೊಳ್ಳಲು ಹೋಗಿದ್ದಾರೆ.
ಈ ವೇಳೆ ಚಾಕುವಿನಿಂದ ಇರಿದು ಚಂದ್ರಪ್ಪನ ಕೊಲೆಗೈದಿದ್ದಾರೆ. ಸದ್ಯ ಆರೋಪಿ ವಿಜಯ್ ಎಂಬಾತನ ಬಂಧನವಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.