ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಎದುರು ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿ ಹಸ್ತಮೈಥುನ ಮಾಡಿಕೊಂಡಿರು ಘಟನೆ ಮಹದೇವಪುರ ಪಾರ್ಕ್ ಎದುರು ನಡೆದಿದೆ.
ಈ ಬಗ್ಗೆ ಯುವತಿ ಎಕ್ಸ್ (ಟ್ವೀಟ್) ಮೂಲಕ ತಾನು ಅನುಭವಿಸಿದ ಈ ಘಟನೆಯನ್ನು ಹಂಚಿಕೊಂಡಿದ್ದಾಳೆ. ಕಳೆದ ಜನವರಿ 5ರ ರಾತ್ರಿ 8:40 ರ ಸುಮಾರಿಗೆ ಮಹದೇವಪುರದ ಬಾಗ್ಮನೆ ಕಾನ್ಸ್ಟೆಲೇಷನ್ ಬ್ಯುಸಿನೆಸ್ ಪಾರ್ಕ್ ಎದುರು ಪಾರ್ಕಿಂಗ್ ಸ್ಥಳದಲ್ಲಿದ್ದ ನನ್ನ ಕಾರಿನೊಳಗೆ ಕುಳಿತಿದೆ.
Mother Killed child: ಗೋವಾದಲ್ಲಿ ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ: ಬೆಂಗಳೂರಿನಲ್ಲಿ CEO ಆಗಿದ್ದ ಹಂತಕಿ!
ಈ ವೇಳೆ ಎಲ್ಲಿಂದಲ್ಲೋ ಬಂದ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ, ನನ್ನನ್ನು ದಿಟ್ಟಿಸುತ್ತಿದ್ದ. ಬಳಿಕ ನನ್ನ ಕಾರಿನ ಮುಂಭಾಗಕ್ಕೆ ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಗೆ ಬೆದರಿದ ನಾನು ಕೂಡಲೇ ಕಾರಿನ ಡೋರ್ ಲಾಕ್ ಮಾಡಿಕೊಂಡು ಅಲ್ಲಿಂದ ಹೊರಡಲು ಮುಂದಾದೆ. ಆದರೆ, ನನ್ನ ಕಾರಿನ ಹಿಂದೆ ಇನ್ನೊಂದು ಕಾರು ಇದ್ದ ಕಾರಣಕ್ಕೆ ಅಲ್ಲಿಂದ ಹೋಗಲು ಆಗಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಹಸ್ತಮೈಥುನ ಮಾಡಿಕೊಂಡೆ, ಕಾರಿನ ಸುತ್ತಲು ಓಡಾಡಲು ಮುಂದಾಗಿದ್ದ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲೇ ನನ್ನ ನೋಡಿ ಸನ್ನೆ ಮಾಡಿದ್ದ. ಕೂಡಲೇ ನಾನು ಸ್ಟಿಯರಿಂಗ್ ಕೆಳಗೆ ಅವಿತುಕೊಂಡು, ನನ್ನ ಸೇಹಿತರಿಗೆ ಫೋನ್ ಮಾಡಿ ಕರೆಸಿಕೊಂಡೆ. ಅವರು ಬರುತ್ತಿದ್ದಂತೆ ಆತ ಮಾಯವಾಗಿದ್ದ.
ಸ್ವಲ್ಪ ಸಮಯದ ನಂತರ ನಾವು ಪಾರ್ಕಿಂಗ್ ಪ್ರದೇಶದಲ್ಲಿ ಹುಡುಕಿದೆವು, ಆದರೆ ವ್ಯಕ್ತಿ ನಾಪತ್ತೆಯಾಗಿದ್ದ. ಇಂತಹ ಕಾಮುಕರಿಂದ ಹೆಣ್ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಯುವತಿ ಹಾಗೂ ಆಕೆ ಪೋಷಕರು ಟ್ವೀಟ್ ಮಾಡಿದ್ದಾರೆ. ಮಹಾದೇವಪುರ ಪೊಲೀಸ್ ಠಾಣೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.