ಬೆಂಗಳೂರು:- ಬೆಂಗಳೂರಿನ ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಬೆಕ್ಕು ಅಡ್ಡ ಬಂದ್ರೆ ಅಪಶಕುನವಾ!?ಸೈಂಟಿಸ್ಟ್ ಹೇಳೋದೆ ಬೇರೆ ಗುರು! ಇದನ್ನು ನೋಡಿ..
ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅತುಲ್ ಸುಭಾಷ್, ನ್ಯಾಯ ಇನ್ನೂ ಬಾಕಿ ಇದೆ ಎಂದು ಬೋರ್ಡ್ ತನ್ನ ಕುತ್ತಿಗೆ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಅಲ್ಲದೇ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆ ಡೆತ್ನೋಟ್ಗಳನ್ನು ಮಧ್ಯರಾತ್ರಿ NGO ವಾಟ್ಸಾಪ್ ಗ್ರೂಪ್ಗೆ ಶೇರ್ ಮಾಡಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದಿದ್ದಾರೆ.
ಅತುಲ್ ಸುಭಾಶ್ ಮಾರತಹಳ್ಳಿಯ ಲೇಔಟ್ನಲ್ಲಿ ವಾಸವಿದ್ದರು. ಈತನಿಗೆ ಮದುವೆಯಾಗಿದ್ದು, ಅತುಲ್ ಮೇಲೆ ಪತ್ನಿ ಉತ್ತರ ಪ್ರದೇಶದಲ್ಲಿ ಕೇಸ್ ಹಾಕಿದ್ದಳು. ಕೌಟುಂಬಿಕ ಕಲಹದಿಂದ ನೊಂದಿದ್ದ ಪತಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೆಂಡತಿ ಸುಳ್ಳು ಕೇಸ್ ಹಾಕಿದ್ರೆ ಹೋರಾಟ ಮಾಡುವ Save Indian family foundation ಎನ್ನುವ NGO ಕೂಡ ಸೇರಿದ್ದ. ಹೀಗಾಗಿ NGOದ ವಾಟ್ಸ್ಆ್ಯಪ್ ಗ್ರೂಪ್ಗೆ ಡೆತ್ ನೋಟ್ ಕಳಿಸಿದ್ದಾನೆ. ಅದರಲ್ಲಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮೆಸೇಜ್ ಮಾಡಿದ್ದಾನೆ.
ಸಾಯುವ ಮುನ್ನ ದಿನ ಡೇ-1 ಹಾಗೂ ಸಾಯುವ ದಿನ ಡೇ-2 ಏನ್ ಮಾಡಬೇಕು ಎಂದು ಗೋಡೆಗೆ JUSTICE IS DUE ಪತ್ರ ಅಂಟಿಸಿದ್ದಾನೆ. ಪ್ರಾಣ ಬಿಡಲು ಕಳೆದ ಎರಡು ದಿನಗಳಿಂದ ತಯಾರಿ ನಡೆಸಿದ್ದಾನೆ. ಸ್ನಾನದಿಂದ ಸಾವಿನವರೆಗೂ ಏನು ಮಾಡಬೇಕೆನ್ನುವ ಬಗ್ಗೆ ಪ್ರಾಕ್ಟೀಸ್ ಮಾಡಿದ್ದು, ಡೇ-1, ಡೇ-2 ಏನೇನು ಮಾಡ್ಬೇಕೆಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.