ಬೆಂಗಳೂರು: ಖಿನ್ನತೆಗೆ ಒಳಗಾಗಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದವರಾದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಠಾಣೆಯಲ್ಲಿ ಈತನ ಮೇಲೆ ಪತ್ನಿ ಕೇಸ್ ಹಾಕಿದ್ದರು. ಇದ್ದರಿಂದ ಮಾನಸಿಕವಾಗಿ ನೊಂದು ಹೋಗಿದ್ದ ಅತುಲ್ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದು ಸೂಸೈಡ್ ಮಾಡಿಕೊಂಡಿದ್ದಾರೆ.
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
ಈ NGOದ ವಾಟ್ಸಾಪ್ ಗ್ರೂಪ್ ಗೆ ಮಧ್ಯರಾತ್ರಿ ಡೆತ್ ನೋಟ್ ಕಳುಹಿಸಿದ್ದ ಅತುಲ್, ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ವಾಟ್ಸಾಪ್ ಮೆಸೇಜ್ ಮಾಡಿದ್ದಾನೆ. ನಂತರ ಕಬೋರ್ಡ್ ಮೇಲೆ ಒಂದಷ್ಟು ಡೀಟೆಲ್ಸ್ ಗಳನ್ನ ಅಂಟಿಸಿರೋ ಮೃತ, ಡೆತ್ ನೋಟ್ ಎಲ್ಲಿದೆ, ಕೀ ಎಲ್ಲಿದೆ, ಏನೇನು ಕೆಲಸ ಆಗಿದೆ, ಏನೇನ್ ಕೆಲಸ ಬಾಕಿ ಇದೆ ಎಲ್ಲವೂ ಉಲ್ಲೇಖ ಮಾಡಿದ್ದಾನೆ. ಅದಲ್ಲದೆ #justice is due# ಬರಹ ಇರೋ ಬೋರ್ಡ್ ಕತ್ತಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.