ಕಾರವಾರ:- ಕಾರವಾರದ ಕಾಜುಭಾಗಲ್ಲಿ ತನ್ನ ಇಚ್ಛೆಯಂತೆ ನಡೆಯದ ಪ್ರೇಯಸಿಗೆ ಚಾಕುವಿನಿಂದ ಪ್ರಿಯಕರ ಇರಿದಿರುವ ಘಟನೆ ಜರುಗಿದೆ.
ಪ್ರಕರಣ ಸಂಬಂಧ ಕಾರವಾರ ನಗರ ಠಾಣೆ ಪೊಲೀಸರು ಆರೋಪಿ ರವಿಶಂಕರ್ ಎಂಬಾತನನ್ನು ಬಂಧಿಸಿದ್ದಾರೆ.
ರವಿಶಂಕರ್ (42) ಮತ್ತು ಕಾಜುಭಾಗ್ ನಿವಾಸಿ ಅಂದಾಜು 26-29 ವರ್ಷ ವಯಸ್ಸಿನ ಮಹಿಳೆಯ ಜೊತೆ ಪ್ರೇಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ತಿಂಗಳಿನಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಾ, ಗುಪ್ತವಾಗಿ ಭೇಟಿಯಾಗುತ್ತಿದ್ದರು. ಆದರೆ, ಮಾರ್ಚ್ 31 ರಂದು ರಾತ್ರಿ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.
ಇದೇ ವೇಳೆ ತನ್ನ ಮಾತಿಗೆ ಸಹಮತಿ ಸೂಚಿಸದ ಹಿನ್ನೆಲೆ ಕ್ರೋಧಗೊಂಡ ರವಿಶಂಕರ್, ಚಾಕು ತೆಗೆದು ಪ್ರೇಯಸಿಯ ಎದೆಗೆ ಇರಿದಿದ್ದನು. ಸದ್ಯ, ಆರೋಪಿ ರವಿಶಂಕರ್ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತ, ಚಾಕು ಇರಿತಕ್ಕೊಳಗಾದ ಮಹಿಳೆಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ