ತುಮಕೂರು : ತುಮಕೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ಬಹಿರಂಗ ವಾಕ್ಸಮರ ಜೋರಾಗೆ ನಡೆಯುತ್ತಿದೆ. ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಇದೀಗ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಸಚಿವ ರಾಜಣ್ಣ, ಜಿ.ಪರಮೇಶ್ವರ್ ವಿರುದ್ದ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದು, ಇದಕ್ಕೆ ರಾಜೇಂದ್ರ ರಾಜಣ್ಣ ತಿರುಗೇಟು ನೀಡಿದ್ದಾರೆ.
ಮಧುಗಿರಿಯಲ್ಲಿ ನಡೆದ ತುಮುಲ್ ನೂತನ ನಿರ್ದೇಶಕರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಶಾಸಕ ಶ್ರೀನಿವಾಸ್ ಎಡಗೈ ಬಲಗೈ ಅಂತಾ ಮಾತಾಡಿದ್ದಾರೆ. ದಲಿತರ ಮೇಲೆ ನಿನಗೆ ಕಾಳಜಿ ಇದ್ದದ್ದೇ ಹೌದಾದರೆ ನಿನ್ನ ಹೆಂಡತಿಗೆ ಟಿಕೆಟ್ ಕೊಡೋದು ಬಿಟ್ಟು ಎಸ್ಸಿ ಎಸ್ಟಿಗೆ ಕೊಡಬೇಕಿತ್ತು. ಆಗ ನೀವು ಮಾತಾಡಿದ್ರೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆವು. ತನ್ನ ಹೆಂಡತಿಗೆ ಅಧಿಕಾರ ಸಿಕ್ಕಿಲ್ಲ ಅಂತಾ ದಿನಾಲೂ ರಾಜಣ್ಣರಿಗೂ ಬೈಯುತ್ತಾರೆ, ಪರಮೇಶ್ವರ್ಗೂ ಬೈಯುತ್ತಾರೆ. ರಾಜಣ್ಣ ಅಥವಾ ಪರಮೇಶ್ವರ್ ಏನಾದರೂ ಮಾತು ಕೊಟ್ಟಿದ್ರಾ..? ನಿನ್ನ ಹೆಂಡ್ತಿಗೆ ಅಧ್ಯಕ್ಷೆಯನ್ನಾಗಿ ಮಾಡ್ತೀವಿ ಅಂತಾ. ದಲಿತರೊಬ್ಬರನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಿದಕ್ಕೆ ಇವರಿಗೆ ತಡ್ಕೊಳ್ಳೋಕ್ಕೆ ಆಗ್ತಿಲ್ಲ. ರಾಜೇಂದ್ರನ ಎಂ ಎಲ್ ಸಿ ಮಾಡಿಸಿದ್ದು ನಾನು ಅಂತಾನೆ. ಯಾರನ್ನ ಗೆಲ್ಸಿದ್ಯಪ್ಪಾ ನೀನು..?, ನಿನ್ನ ಎಂ ಎಲ್ ಎ ಚುನಾವಣೆಗೆ ನಾವು ಒಂದು ಓಡಾಡಿದ್ದು ಗೊತ್ತಾ ಅಂತಾ ಕಿಡಿಕಾರಿದ್ದಾರೆ.
ಜೊತೆಗೆ ಮಾಜಿ ಸಚಿವ ಮಾಧುಸ್ವಾಮಿ ವಿರುದ್ಧವೂ ಕೂಢ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರಾಜೇಂದ್ರ ರಾಜಣ್ಣ, ತುಮುಲ್ ಗೆ ನಾಮಿನಿ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಮಾಧುಸ್ವಾಮಿ ನಾಲಾಯಕ್ ಎಂಬ ಪದ ಪ್ರಯೋಗ ಮಾಡಿದ್ದಾರೆ..ಏನಪ್ಪಾ ನೀನು ನಾಲಾಯಕ್ ಎಂಬ ಮಾತನ್ನು ಬಳಸಿದ್ಯಲ್ಲಪ್ಪಾ..? ನೀನ್ ಏನಪ್ಪಾ..? ಬಹಳ ಬುದ್ದಿವಂತ ಎಂದು ಹೇಳಬೇಕ ನಿಮ್ಮನ್ನ..?, ನಮಗೂ ಮಾತಾಡೋಕೆ ಬರುತ್ತೆ. ಆದರೆ ಹಿರಿಯರು ಅಂಥಾ ಸುಮ್ಮನಿರುತ್ತೀವಿ. ನಿಮ್ಮ ಪಕ್ಷದವರೇ ನಾಮಿನಿ ಸದಸ್ಯನ ಅಧ್ಯಕ್ಷರನ್ನಾಗಿ ಮಾಡಿದ್ರಲ್ಲಾ. ನೀವು ಎಂಎಲ್ ಎ ಸೋತಿದ್ದು ನಿಮ್ಮ ದುರಹಂಕಾರಕ್ಕೆ ಎಂದು ದೂರಿದ್ರು.