ಭಾರತದಲ್ಲಿ ಟೊಮೆಟೊ ಕೃಷಿಯು ಅತ್ಯಂತ ಲಾಭದಾಯಕ ಕೃಷಿ ವ್ಯಾಪಾರವಾಗಿದೆ. ಆಲೂಗಡ್ಡೆ ನಂತರ ಇದು ವಿಶ್ವದ ಎರಡನೇ ಪ್ರಮುಖ ಬೆಳೆಯಾಗಿದೆ. ಇದನ್ನು ಕಚ್ಚಾ ಅಥವಾ ಬೇಯಿಸಿದ ರೂಪದಲ್ಲಿ ತಿನ್ನಲಾಗುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ‘ಎ’ ಮತ್ತು ‘ಸಿ’ ನಂತಹ ವಿಟಮಿನ್ಗಳನ್ನು ಹೊಂದಿರುತ್ತದೆ. ಈ ಪ್ರಯೋಜನಗಳಿಂದಾಗಿ, ವರ್ಷವಿಡೀ ಟೊಮೆಟೊ ಬೇಡಿಕೆ ಹೆಚ್ಚಾಗಿರುತ್ತದೆ.
ಬೆಲೆ ಇಲ್ಲದಿದ್ದರೆ ಜಾಮ್ ಮಾಡಬಹುದು!
ರೈತರು ಟೊಮೇಟೊ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಕೆಲವು ಸಮಯದಲ್ಲಿ ಬೆಲೆ ಸಿಗದಿದ್ದ ಪಕ್ಷದಲ್ಲಿ ಇದನ್ನು ಜಾಮ್ ಮಾಡುವ ಮೂಲಕ ಆರ್ಥಿಕವಾಗಿ ಬೆಳೆಯಬಹುದು ಎಂದು ತಿಳಿಸಿದರು. ಟೊಮೇಟೊ ವರ್ಷವಿಡೀ ಬೆಲೆ ಇರುತ್ತದೆ.
ಭಾರತದಲ್ಲಿ ಆಂದ್ರ ಪ್ರದೇಶ, ಕರ್ನಾಟಕ, ಒರಿಸ್ಸಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಳೆಯಲಾಗುತ್ತದೆ
ಟೊಮಾಟೊ ಬೀಜವನ್ನು ತಂದು 25 ದಿನಗಳ ಕಾಲ ನರ್ಸರಿಯಲ್ಲಿ ಬೆಳೆಸಿದ ನಂತರ ನಾಟಿ ಮಾಡಬೇಕು.
ಸಾಲಿನಿಂದ ಸಾಲಿಗೆ ನಾಲ್ಕು ಅಡಿಗಳ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಂತೆ ಒಂದು ಎಕರೆಯಲ್ಲಿ ಅಂದಾಜು 6 ಸಾವಿರ ಗಿಡಗಳನ್ನು ನಾಟಿ ಮಾಡಬೇಕು. ಕರ್ನಾಟಕದ ಚಿಕ್ಕಬಳ್ಳಾಪುರ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್, ಕೋಲಾರ, ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಹಳ್ಳಿಗಳಲ್ಲಿ ಟೊಮಾಟೊ ಬೆಳೆಯಲಾಗುತ್ತದೆ. ಹನಿ ನೀರಾವರಿ ಟೊಮಾಟೊ ಬೆಳೆಗೆ ಉತ್ತಮ ಪದ್ದತಿಯಾಗಿದೆ.
ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರುಮೆಟ್ರಿಕ್ ಟನ್ ಉತ್ಪಾದನೆಯೊಂ 880 ಸಾವಿರ ಹೆಕ್ಟೇರ್ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್ಗೆ 20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227 ಸಾವಿರ ದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಅಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಟೊಮೆಟೊಗೆ ಎಲ್ಲಾ ಕಾಲದಲ್ಲಿಯೂ ಬೇಡಿಕೆ ಇದ್ದದ್ದೇ. ಹೀಗೆ ಬಹು ಬೇಡಿಕೆಯಿರುವ ಟೊಮೆಟೊಗೆ ಕಾಯಿ ಕೊರೆಯುವ ಹುಳುಗಳು ಬಹು ದೊಡ್ಡ ಸವಾಲು. ಈ ಕೀಟಗಳು ಸುಮಾರು ಶೇ 50ಕ್ಕಿಂತಲೂ ಹೆಚ್ಚು ಬೆಳೆ ನಾಶಪಡಿಸಿ ದೊಡ್ಡ ಮೊತ್ತದ ನಷ್ಟ ಉಂಟುಮಾಡುತ್ತದೆ.
ಕೀಟ ಬಾಧೆ ಮತ್ತು ಪರಿಹಾರ
ತಂಬಾಕು ಎಲೆ ತಿನ್ನುವ ಹುಳು ಟೊಮಾಟೊ ಗಿಡವನ್ನು ಕಾಡುತ್ತದೆ. ಕಡು ಹಸಿರು ಬಣ್ಣದ ದೇಹ ಕಂದು ಮಚ್ಚೆಗಳಿಂದ ಕೂಡಿರುತ್ತದೆ. ಗಿಡದ ಮೊಗ್ಗು, ಹೂಗಳನ್ನು ತಿನ್ನುತ್ತವೆ ಈ ಹುಳು. ಕಾಯಿ ಕಟ್ಟುತ್ತಿದ್ದಂತೆ ಕಾಯಿಯ ಮೇಲೆ ದಾಳಿಮಾಡುತ್ತವೆ, ಕಾಯಿ ಕೊರೆದು ತಿನ್ನುತ್ತದೆ, ಹಾಗೆ ತನ್ನ ದೇಹದ ಅರ್ಧ ಭಾಗದಷ್ಟು ಮಾತ್ರ ಕಾಯಿಯ ಒಳಗೆ ರಂಧ್ರ ಕೊರೆದು ತಿನ್ನುತ್ತದೆ ಮತ್ತು ತನ್ನ ತ್ಯಾಜ್ಯ ಹೊರಹಾಕುತ್ತದೆ, ಹೊರಹಾಕಿದ ತ್ಯಾಜ್ಯ ಕಾಯಿಯೊಂದಿಗೆ ಕೊಳೆತು ಕೆಟ್ಟ ವಾಸನೆ ಬರುತ್ತದೆ.
ಇಂತಹ ಟೊಮೆಟೊ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತವೆ. ಈ ಕೀಟಗಳು ಎಳೆಯ ಕಾಯಿಯಿಂದ ಹಿಡಿದು ಸಂಪೂರ್ಣ ಹಣ್ಣಾದ ಎಲ್ಲಾ ಹಂತದ ಕಾಯಿಗಳನ್ನು ಕೊರೆದು ತಿನ್ನುತ್ತವೆ. ಹೀಗಾಗಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಿ, ಆಳವಾಗಿ ಉಳುಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ. ಇವುಗಳನ್ನು ಕೀಟ ಭಕ್ಷಕ ಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ. ಗಿಡಗಳ ಮೇಲೆ ಕಾಣುವ ಕೀಟಗಳನ್ನು ಹಿಡಿದು ನಾಶಪಡಿಸುವುದು.
ಈ ಕೀಟಗಳು ಎಲೆಯ ಕೆಳಭಾಗದಲ್ಲಿ ಹೂಗಳ ಹತ್ತಿರ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು. ಟೊಮೆಟೊ ಸುತ್ತ ಅಡೆ ಸಾಲು ಬೆಳೆಯಾಗಿ ಹರಳು ಅಥವಾ ತಂಬಾಕು ಅಥವಾ ಮುಸುಕಿನ ಜೋಳ ಅಥವಾ ಸೇವಂತಿಗೆ ಹೂ ಬೆಳೆದರೆ, ಈ ಕೀಟಗಳು ಹರಳು ಅಥವಾ ಸೇವಂತಿಗೆ ಹೂ ಗಿಡಗಳಿಗೆ ಹೆಚ್ಚು ಆಕರ್ಷಿತವಾಗುತ್ತದೆ ಮತ್ತು ಟೊಮೆಟೊ ಬೆಳೆಗೆ ಹಾನಿ ಕಡಿಮೆಯಾಗುತ್ತದೆ.
ಸಾರಜನಕಯುಕ್ತ (ಯೂರಿಯಾ) ರಸಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಸಾರಜನಕ ಹೆಚ್ಚಾದರೆ, ಗಿಡಗಳು ದಟ್ಟವಾಗಿ ಬೆಳೆದು ಕೀಟಗಳಿಗೆ ಉತ್ತಮ ಆಹಾರವಾಗುತ್ತದೆ. ಟ್ರೈಕೋಗ್ರಾಮ ಎಂಬ ಪರಾವಲಂಬಿ ದುಂಬಿಗಳು ಟ್ರೈಕೋಕಾರ್ಡ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ, ಇವುಗಳನ್ನು ಎಕರೆಗೆ 1.5 ಸೀ. ಸೀ. ಕಾರ್ಡ್ಗಳನ್ನು ಗಿಡಗಳಿಗೆ ಕಟ್ಟಬಹುದು.
ನ್ಯೂಕ್ಲಿಯರ್ ಪಾಲಿ ಹೈಡ್ರೋಸಿಸ್ ವೈರಸ್ ಅನ್ನು ಶೇ 2ರಷ್ಟು ಹಾಕಬೇಕು. ಇದು ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿ ಲೀಟರ್ ನೀರಿಗೆ 1 ಮೀ.ಲೀ. ಬೆರೆಸಿ ಸಿಂಪಡಿಸಬಹುದು.ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ 5–10 ಮೀ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೇ ಕೀಟ ನಾಶವಾಗುತ್ತದೆ.