ತುಮಕೂರು:- ಡೀಸೆಲ್ ತುಂಬಿದ್ದ ಲಾರಿ ಪಲ್ಟಿ ಹೊಡೆದ ಹಿನ್ನೆಲೆ, ಡೀಸೆಲ್ ಗೆ ಜನತೆ ಮುಗಿಬಿದ್ದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಹರಿಸಮುದ್ರ ಗೇಟ್ ಬಳಿ ಜರುಗಿದೆ.
ಅತಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಡೀಸೆಲ್ ಲಾರಿ ಉರುಳಿ ಬಿದ್ದಿದೆ. ಈ ವೇಳೆ ಬೈಕ್ಗೆ ಡಿಕ್ಕಿಯಾಗಿ ರಸ್ತೆ ಮೇಲೆ ಡೀಸೆಲ್ ಲಾರಿ ಉರುಳಿಬಿದ್ದಿದೆ. ಬೈಕ್ ನಲ್ಲಿದ್ದ ಮಹಿಳೆ ಸರ್ವಮಂಗಳಗೆ ಸಣ್ಣಪುಟ್ಟ ಗಾಯವಾಗಿದೆ.
Video Player
00:00
00:00
ಲಾರಿಯಿಂದ ಡೀಸೆಲ್ ಹರಿದ ಕಾರಣ ಡೀಸೆಲ್ ಗೆ ಜನತೆ ಮುಗಿಬಿದ್ದಿದ್ದಾರೆ. ನಾ ಮುಂದು ತಾ ಮುಂದು ಎಂದು ಜನತೆ ಡೀಸೆಲ್ ಕೊಂಡೊಯ್ದಿದ್ದಾರೆ. ಕ್ಯಾನ್,ಬಾಟಲ್ ಗಳಲ್ಲಿ ಡೀಸೆಲ್ ತುಂಬಿಕೊಂಡು ಜನರು ಹೋಗಿದ್ದಾರೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.