ನವದೆಹಲಿ: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಂತೆ ರಾಜ್ಯ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಕೂಡ ಈ ಬಗ್ಗೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸರ್ಕಾರ, 2023-24 ಮಾರುಕಟ್ಟೆ ಋತುವಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮಿಲ್ಲಿಂಗ್ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ 300 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ ಪ್ರತಿ ಕ್ವಿಂಟಾಲ್ಗೆ 11,160 ರೂಪಾಯಿ ಆಗಿದೆ. ಅದೇ ರೀತಿ ಪೂರ್ಣ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ಗೆ 250 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ 12 ಸಾವಿರ ರೂಪಾಯಿ ಆಗಿದೆ. ಕೇಂದ್ರ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್,
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಈ ನಿರ್ಧಾರವು ಭಾರತೀಯ ತೆಂಗು ಬೆಳೆಗಾರರಿಗೆ ಉತ್ತಮ ಪ್ರತಿಫಲವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ಇತರವುಗಳಲ್ಲಿ, ಬಿಹಾರದ ದಿಘಾ ಮತ್ತು ಸೋನೆಪುರವನ್ನು ಸಂಪರ್ಕಿಸುವ ಗಂಗಾನದಿಯ ಮೇಲೆ ಹೊಸ 4.56-ಕಿಲೋಮೀಟರ್ ಉದ್ದದ ಆರು ಪಥದ ಸೇತುವೆಯನ್ನು ನಿರ್ಮಿಸಲು ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆಯನ್ನು ನೀಡಿತು.
ಸೇತುವೆ ಪೂರ್ಣಗೊಂಡ ನಂತರ ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಇದು ಸಂಪರ್ಕಿಸುತ್ತದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ 2024 ರ ಮಾರುಕಟ್ಟೆ ಋತುವಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಗರಿ ಅಥವಾ ಗೋಲಾ ಎಂದೂ ಕರೆಯಲ್ಪಡುವ ಕೊಬ್ಬರಿ, ತೆಂಗಿನಕಾಯಿಯ ಒಣ ಭಾಗವನ್ನು ಸೂಚಿಸುತ್ತದೆ.