ಕೋಲಾರ :– 7 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಿಎಸ್ ವೆಂಕಟೇಶ್ ಅವ್ರು ತಿಳಿಸಿದ್ರು.
ಕೋಲಾರ ತಾಲೂಕಿನ ವೇಮಗಲ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು,
ಗಲ್ಲಿ ಗಲ್ಲಿಯಲ್ಲಿ ಕನ್ನಡ ಬಾವುಟ ಕನ್ನಡದ ದೀಪಾಲಂಕಾರಗಳು ರಾರಾಜಿಸುತ್ತಿವೆ ವಿಶೇಷವಾಗಿ 7 ನೇ ವರ್ಷದ ಕನ್ನಡದ ಹಬ್ಬವನ್ನು ಎಲ್ಲಾ ಸಂಘಟನೆಗಳ ಜೊತೆಗೆ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೆವೆ ಇದು ಒಂದು ವಿಶೇಷ ದಿನವಾಗಿದ್ದು ಸಂವಿಧಾನ ಸಮರ್ಪಣಾ ದಿನವಾಗಿದೆ ಇಂತಹ ದಿನ ಕನ್ನಡದ ಹಬ್ಬ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ತಿಳಿಸಿದ್ರು.
ಅಲ್ಲದೆ ಸಂಜೆ ರಸಮಂಜರಿ ಕಾರ್ಯಕ್ರಮವಿದ್ದು ಸಿನಿಮಾ ನಟರು ಆಗಮಿಸಲಿದ್ದಾರೆ ಎಂದು ಹೇಳಿದ್ರು., ಕರ್ನಾಟಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬಣ್ಣ ( ನಾರಾಯಣಸ್ವಾಮಿ), ವಿ.ಪಿ ಪ್ರಕಾಶ್, ಕಾರು ಮಣಿ,ಯುವ ಮುಖಂಡ ವೆಂಕಟೇಶ್, ವಕೀಲ ನಾಗೇಶ್, ವೆಂಕಟೇಶ್ ಗೌಡ, ತರಕಾರಿ ಆರ್.ಎಂ ಮಂಜುನಾಥ್, ಆಶೋಕ್, ಮೇಡಿಹಾಳ ಮುನಿಆಂಜಿ, ಕ.ಹಿ.ವೇ ಜಿಲ್ಲಾಧ್ಯಕ್ಷ ಸಂತೋಷ್, ಮುನಿಶಾಮಿ, ಚಂದ್ರು, ಶಂಕರ್, ಅಯ್ಯಪ್ಪ, ಬಾಬು, ಶಶಿ, ಗಂಗರಾಜು, ವೇಮಗಲ್ ರವಿ, ಬಿನಯ್, ಆಟೋ ಮಾಲೀಕರು, ಚಾಲಕರು, ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು