ಬೆಂಗಳೂರು:- ಕನ್ನಡ ಟೀಚರ್ ಓರ್ವರು ಕ್ಷುಲ್ಲಕ ವಿಚಾರಕ್ಕೆ ಪುಟ್ಟ ಮಗುವಿನ ಕೈ ಮುರಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಸ್ಕೂಲ್ ನಲ್ಲಿ ಗಲಾಟೆ ಮಾಡ್ತಿದ್ಳು ಎಂದು ಕೋಲಿನಲ್ಲಿ ಕೈಗೆ ಹೊಡೆದು
ಕನ್ನಡ ಟೀಚರ್ ಕೈ ಮುರಿದಿದ್ದಾರೆ. ಕಳೆದ ತಿಂಗಳು 28ನೇ ತಾರೀಖು ಸ್ಕೂಲ್ ನಲ್ಲಿ ಬೇರೆ ಮಕ್ಕಳ ಜೊತೆಗೆ ಸೇರಿಕೊಂಡು ಏಳು ವರ್ಷದ ಅನ್ನಪೂರ್ಣ ಗಲಾಟೆ ಮಾಡ್ತಿದ್ಳು ಎಂದು ಟೀಚರ್ ಮಮತಾ ಮಗುವಿಗೆ, ಕೋಲಿನಲ್ಲಿ ಜೋರಾಗಿ ಹೊಡೆದಿದ್ದಾರಂತೆ.
ಇದರಿಂದ ಮಗುವಿನ ಬಲಗೈ ಭುಜದ ಮೂಳೆ ಮುರಿದು ಹೋಗಿದೆ. ಆದರೆ ಮಗು ಅನ್ನಪೂರ್ಣ ಎರಡ್ಮೂರು ದಿನ ನೋವಿನಲ್ಲೇ ಪರದಾಡಿದ್ದಾಳೆ. ಈ ಬಗ್ಗೆ ದೀಪಾವಳಿಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬರಲು
ಹೋದಾಗ ತಾಯಿ ನಾಗರತ್ನಗೆ ಗೊತ್ತಾಗಿದೆ. ಮಗುವಿನ ತಾಯಿ ನಾಗರತ್ನ ಟೀಚರ್ ಮಮತಾನ ಕೇಳಿದ್ರೆ, ನಾನು ಹೊಡೆದಿಲ್ಲ. ನಿನ್ನ ಮಗಳು ಎಲ್ಲೋ ಬಿದ್ದಿರಬೇಕು ಎಂದು ಜೋರು ಮಾಡ್ತಿದ್ದಾಳಂತೆ. ಆ ಶಾಲೆಯ ಹೆಡ್ ಮೇಡಂ ಮಹಾಲಕ್ಷ್ಮಿ ಬಳಿ ಈ ಬಗ್ಗೆ ಹೇಳಿದ್ರೆ. ಮಮತಾ ಬಳಿ ಹೇಳಿ ಟ್ರಿಟ್ಮೆಂಟ್ ಕೊಡಿಸ್ತಿನಿ ಎಂದು ಭರವಸೆ ನೀಡಿದ್ರಂತೆ. ಆದರೆ ಇಲ್ಲಿಯವರೆಗೆ ಯಾವುದೇ ಟ್ರಿಟ್ಮೆಂಟ್ ಕೊಡಿಸಿಲ್ಲ. ಇತ್ತ ಬಡ ಕುಟುಂಬ ಮಗುವಿಗೆ ಟ್ರಿಟ್ಮೆಂಟ್ ಕೊಡಿಸಲು ಆಗದೆ ಪರದಾಡುವಂತಾಗಿದೆ.
ರಾಜಾಜಿನಗರದ ಅಂಬೇಡ್ಕರ್ ಮೆಮೊರಿಯಲ್ ಸ್ಕೂಲ್ ನಲ್ಲಿ ಅನ್ನಪೂರ್ಣ ಎರಡನೇ ತರಗತಿಯಲ್ಲಿ ಓದುತ್ತಿದ್ದಾರೆ. ರಾಜಾಜಿನಗರ ಅಕ್ಕಮಹಾದೇವಿ ಹೆಣ್ಣುಮಕ್ಕಳ ಹಾಸ್ಟೆಲ್ ನಲ್ಲಿ ಮಗು ವಾಸವಾಗಿದೆ.
ಟೀಚರ್ ಮೇಲಿನ ಭಯಕ್ಕೆ ಮಗು ಮತ್ತೆ ಹಾಸ್ಟೆಲ್ ಗೆ ಹೋಗಲ್ಲ ಎಂದು ಕಣ್ಣೀರು ಹಾಕುತ್ತಿದ್ದಾಳಂತೆ. ಅನ್ನಪೂರ್ಣಗೆ ಎಕ್ಸ್ ರೇ ಮಾಡಿಸಿದಾಗ ಬಲ ಭುಜದ ಮೂಳೆ ಮುರಿದಿರುವುದು ಗೊತ್ತಾಗಿದೆ. ಡಾಕ್ಟರ್ ಆಪರೇಷನ್ ಮಾಡಲು ಹೇಳಿದ್ದಾರೆ.ಬಡತನದಿಂದ ಆಪರೇಷನ್ ಮಾಡಿಸಲು ಆಗದೆ, ಆಯುರ್ವೇದಿಕ್ ಡಾಕ್ಟರ್ ಹತ್ತಿರ ಪಟ್ಟು ಹಾಕಿಸಿದ್ದಾರೆ. ಪ್ರತಿದಿನ ನೋವಿಗೆ ಮಗು ಅನ್ನಪೂರ್ಣ ರಾತ್ರಿ ವೇಳೆಯಲ್ಲಿ ಕಣ್ಣೀರು ಹಾಕುತ್ತಾಳಂತೆ .