ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿ ಒಂದು ಕನ್ನಡ ಪಬ್ ಇದ್ದು ಇದರಲ್ಲಿ ಕನ್ನಡ ವರ್ಣಮಾಲೆ, ಕನ್ನಡ ಹೋರಾಟಗಾರು, ಕನ್ನಡ ಸಿನಿಮಾ ಕಲಾವಿದರು, ಕನ್ನಡದ ಖ್ಯಾತ ಉದ್ಯಮಿಗಳ ಪೋಟೋಗಳನ್ನು ಅಳವಡಿಸಲಾಗಿದೆ. ಅಲ್ಲದೆ ಕನ್ನಡ ವರ್ಣಮಾಲೆಗಳನ್ನು ಕೂಡ ಪಬ್ನಲ್ಲಿ ಹಾಕಿದ್ದು, ನೋಡುಗರನ್ನು ಸೆಳೆಯುತ್ತಿವೆ
IPL 2024: ಫೈನಲ್ ನಲ್ಲಿ ಹೈದರಾಬಾದ್ ಗೆ ಹೀನಾಯ ಸೋಲು.. ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ಕಾವ್ಯ ಮಾರನ್!
ಈ ಪಬ್ನಲ್ಲಿ ಕನ್ನಡ ಹಾಡುಗಳಷ್ಟೇ ಪ್ಲೇ ಆಗಲಿದ್ದು, ಕನ್ನಡ ಬಾರದೇ ಇರುವವರಿಗೂ ಕನ್ನಡ ಕಲಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಯಾವ ಪಬ್ ನೋಡಿದರೂ ಇಂಗ್ಲಿಷ್ ಹಾಡುಗಳನ್ನೇ ಹಾಕಿರುತ್ತಾರೆ. ಜೊತೆಗೆ ಪಬ್ಗಳಲ್ಲಿ ಕನ್ನಡ ಮಾತನಾಡುವರು ಸಿಗುವುದು ಕೂಡ ಇಲ್ಲ. ಇವೆಲ್ಲವನ್ನು ಗಮನಿಸಿ ಕನ್ನಡ ಪಬ್ ಒಪನ್ ಮಾಡಲಾಯಿತು. ಇಲ್ಲಿ ಊಟದ ಮೆನುವಿನಿಂದ ಹಿಡಿದು ಎಲ್ಲವೂ ಕನ್ನಡದಲ್ಲೇ ಇವೆ. ಸಪ್ಲೈಯರ್ಗಳನ್ನು ಕೂಡ ಕನ್ನಡ ಮಾತನಾಡುವವರನ್ನೇ ನೇಮಿಸಿದ್ದೇವೆ. ಅಲ್ಲದೇ ಕನ್ನಡ ಹಾಡುಗಾರರ, ಹಾಡುಗಳ ಮೂಲಕ ಇಲ್ಲಿ ಪ್ರತಿದಿನ ಬಂದಂತಹ ಜನರನ್ನು ರಂಜಿಸುವ ಕೆಲಸ ಮಾಡಲಾಗುತ್ತಿದೆ
ಬೆಂಗಳೂರಿನಲ್ಲಿ ಕನ್ನಡ ಕೇಳುವುದೇ ಕಷ್ಟವಾಗಿ ಹೋಗಿದೆ. ಎಷ್ಟೇ ವರ್ಷಗಳು ಕಳೆದರೂ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಅನ್ನೋದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸದ್ಯ ಕನ್ನಡ ಪ್ರೇಮದ ಪಬ್ ಆರಂಭಿಸಿರುವುದರಿಂದ ತುಂಬಾ ಖುಷಿಯಾಗುತ್ತಿದೆ. ಎಲ್ಲಿ ನೋಡಿದರೂ ಕನ್ನಡ ವರ್ಣಮಾಲೆಗಳೇ ಕಾಣಿಸುತ್ತಾ ಇವೆ