ಬೆಳಗಾವಿ:- ವಿವಾಹಿತ ಸ್ತ್ರೀ ಜೊತೆ ಗಂಡ ಓಡಿ ಹೋದ ಹಿನ್ನೆಲೆ, ಠಾಣೆ ಮುಂದೆ ಮಹಿಳೆ ಕಣ್ಣೀರು ಹಾಕ್ತಿರುವ ಘಟನೆ, ಬೆಳಗಾವಿ ತಾಲೂಕಿನ ಮಾರಿಹಾಳದಲ್ಲಿ ಜರುಗಿದೆ.
ಇದೆಂಥಾ ಕೃತ್ಯ: ಕಲ್ಲಿನಿಂದ ನಾಯಿ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಪರಸ್ತ್ರೀ ಜತೆ ಬಸವರಾಜ ಸೀತಾಮನಿ ಓಡಿಹೋಗಿರುವ ಸದಸ್ಯೆ ವಾಣಿಶ್ರೀ ಪತಿ. ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
25 ದಿನಗಳ ಹಿಂದೆ ವಿವಾಹಿತೆ ಮಾಸಾಬಿ ಜೊತೆ ಓಡಿಹೋಗಿರುವ ಆರೋಪ ಮಾಡಲಾಗಿದೆ. ನನ್ನ ಜೀವನ ಹಾಳುಮಾಡಿ ಬೇರೆಯವಳ ಜೊತೆ ಇರಲು ನಾನು ಬಿಡಲ್ಲ. ನನಗೆ ಪತಿ, ಮಕ್ಕಳು ಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀ ಪಟ್ಟುಹಿಡಿದಿದ್ದಾರೆ
ಆಕೆ ಗಂಡನನ್ನು ಬಿಟ್ಟು ನಿಂತಿದ್ದಾಳೆ ಎಂದು ನಾನು ಹಾಗೆಯೇ ನಿಲ್ಲಬೇಕಾ? ಮಾಸಾಬಿಗೆ ನನ್ನ ಪತಿ ಬಸವರಾಜ ಸೀತಾಮನಿ ಬಿಟ್ಟುಕೊಡುವುದಿಲ್ಲ. ನಿನ್ನೆ ನನಗೆ ಕರೆ ಮಾಡಿ ನಿನ್ನ ಗಂಡನನ್ನು ಬಿಡಲ್ಲವೆಂದು ಹೇಳಿದ್ದಾಳೆ. ಹಾಗಾಗಿ ಪೊಲೀಸರೇ ನ್ಯಾಯ ಕೊಡಿಸಬೇಕೆಂದು ವಾಣಿಶ್ರೀ ಒತ್ತಾಯಿಸಿದ್ದಾರೆ.