ಕೀನ್ಯಾ: ಅನ್ಯಗ್ರಹ ಜೀವಿಗಳು ಇವೆ ಎಂಬುದನ್ನು ಆಗಾಗ ಕೇಳುತ್ತಲೆ ಇರುತ್ತೆವೆ. ಅವುಗಳು ಭೂಮಿಗೆ ಬಂದಿವೆ ಎಂದು ಕೆಲವೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೆ ಇವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇದರ ನಡುವೆ ಕೀನ್ಯಾ ಗ್ರಾಮವೊಂದರಲ್ಲಿ ಆಗಸದಿಂದ ಏಕಾಏಕಿ ಬೃಹತ್ ಗಾತ್ರದ ಲೋಹದ ಉಂಗುರದ ಆಕಾರವೊಂದು
ಭೂಮಿಗೆ ಬಿದ್ದಿದೆ.
ಉಂಗುರದ ಗಾತ್ರದ ವಸ್ತು ಬಿದ್ದ ಸದ್ದು ಕೇಳಿ ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ಆದರೆ ಹತ್ತಿರಬರುತ್ತಿದ್ದಂತೆ ಉಂಗುರ ಆಕಾರದಲ್ಲಿರುವ ಲೋಹ ಅನ್ನೋದು ಗೊತ್ತಾಗಿದೆ. ಇದು ಏಲಿಯನ್ ವಿಮಾನ ಇರಬಹುದೇ? ಅಥವಾ ಏಲಿಯನ್ ವಿಮಾನ ಅಪಘಾತದ ಸಂಭವಿಸಿತೆ ಅನ್ನೋ ಆತಂಕ ಜನರಲ್ಲಿ ಕಾಡಿತ್ತು. ಮಾಹಿತಿ ತಿಳಿದು ಹಲವು ಅಧಿಕಾರಿಗಳ ತಂಡ ಕೀನ್ಯಾದ ಮುಕುಕು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಇದೇ ವೇಳೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ಕೂಡ ಸ್ಥಳಕ್ಕೆ ಧಾವಿಸಿ ಅಧ್ಯಯನ ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಬಾಹ್ಯಾಕಾಶ ನೌಕೆಯ ಅವಶೇಷ ಎನ್ನಲಾಗುತ್ತಿದೆ.
ಬಾಹ್ಯಾಕಾಶದ ತ್ಯಾಜ್ಯವು ಮಾನವೀಯತೆಗೆ ದೊಡ್ಡ ಅಪಾಯವಾಗಬಹುದು ಎಂಬ ಆತಂಕಗಳನ್ನು ಹೆಚ್ಚಿಸುವಂತೆ ಘಟನೆ ಕೀನ್ಯಾದಲ್ಲಿ ನಡೆದಿದೆ. ನೆಲಕ್ಕೆ ಬಿದ್ದಿರುವ ಉಂಗುರ ಆಕಾರದ ಲೋಹ ಬಾಹ್ಯಾಕಾಶ ರಾಕೆಟ್ನದ್ದೆಂದು ಹೇಳಲಾಗುತ್ತಿದೆ. ಆದರೆ ಕೀನ್ಯಾದ ಮುಕುಕು ಗ್ರಾಮಸ್ಥರ ಆತಂಕ ಮಾತ್ರ ಕಡಿಮೆಯಾಗಿಲ್ಲ. ಮನೆಯಲ್ಲಿ ಇರಲು ಭಯಪಡುತ್ತಿದ್ದಾರೆ. ಯಾವಾಗ ಆಗಸದಿಂದ ಮನೆ ಮೇಲೆ ರೀತಿಯ ಲೋಹದ ಅವಶೇಷ ಮನೆ ಮೇಲೆ ಬೀಳುತ್ತೋ ಎಂದು ಆತಂಕಗೊಂಡಿದ್ದಾರೆ. ಈ ಲೋಹದ ತುಂಡಿನ ಬಗ್ಗೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ತನಿಖೆ ಆರಂಭಿಸಿದೆ.