ಹುಬ್ಬಳ್ಳಿ:- ಬೇಸಿಗೆ ಆರಂಭವಾಗಿದ್ದು, ಈ ಸಮಯದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವುದು ಸಹಜ. ಹೀಗಾಗಿ ಕುಡಿಯುವ ನೀರನ್ನು ವ್ಯರ್ಥ ಖರ್ಚು ಮಾಡಬಾರದು.
ಆದರೆ ಇಲ್ಲಿ ಬಿರು ಬೇಸಿಗೆಯಲ್ಲೋ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಧಾರವಾಡ ಜಿಲ್ಲಾಡಳಿತ ನಿಷ್ಕಾಳಜಿಯಿಂದ ನಗರದ ಹೃದಯಭಾಗ ಚೆನ್ನಮ್ಮಸರ್ಕಲ್ ಬಳಿ ನೀರು ಪೋಲಾಗುತ್ತಿದೆ. ನಿನ್ನೆಯಿಂದಲೇ ಪೈಪ್ ಒಡೆದು ನೀರು ರಸ್ತೆಗೆ ಹರಿಯುತ್ತಿದ್ದರೂ ಕಂಡು ಕಾಣದಂತೆ ನೀರು ಸರಬರಾಜು ಹೊಣೆ ಹೊತ್ತಿರುವ ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳು ಮೌನವಹಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಆಕ್ರೋಶ ಹೊರ ಹಾಕಿದ್ದಾರೆ. ಕಡುಬೇಸಿಗೆಯಲ್ಲೋ ಅಪಾರ ಪ್ರಮಾಣದ ನೀರು ಪೋಲಿಗೆ ಆಕ್ರೋಶ ಹೊರ ಹಾಕಿದ್ದಾರೆ.
ಸತತವಾಗಿ 24 ಗಂಟೆಗಲ ಕಾಲ ಕುಡಿಯುವ ನೀರು ಪೋಲಾಗುತ್ತಿದೆ. ಇದು ಧಾರವಾಡ ಜಿಲ್ಲಾಡಳಿತ ನಿಷ್ಕಾಳಜಿಗೆ ಎಂದಿದ್ದಾರೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ನೀರು ಪೋಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.