ಚಿತ್ರದುರ್ಗ: ಕ್ವಿಂಟಾಲ್ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಬೆಳಕಿಗೆ ಬಂದಿದೆ. ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಬರುವ ಜನರಿಗೆ ವಿತರಿಸಲೆಂದು ಸಿದ್ಧಪಡಿಸಿದ್ದ ಬಿರಿಯಾನಿ ನೆಲದಪಾಲಾಗಿದೆ. ಸಮಾವೇಶಕ್ಕೆ ನಿರೀಕ್ಷೆಯಷ್ಟು ಜನರು ಬಾರದ ಹಿನ್ನೆಲೆಯಲ್ಲಿ ಉಳಿದ ಚಿಕನ್ ಬಿರಿಯಾನಿ ಹಾಗೂ ಪಲಾವ್ ಸಂಪೂರ್ಣವಾಗಿ ನೆಲದ ಪಾಲಾಗಿದೆ.
ಜನರು ಸೇರುವ ನಿರೀಕ್ಷೆಯಿಂದ ಮೂರುವರೆ ಲಕ್ಷಕ್ಕೂ ಅಧಿಕ ಜನರಿಗೆಂದು ಬಿರಿಯಾನಿ ತಯಾರಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಆಗಮಿಸದ ಹಿನ್ನಲೆ ತಯಾರಿಸಲು ತಂದಿದ್ದ ಕೆಲವು ಆಹಾರ ಸಾಮಗ್ರಿಗಳನ್ನು ಆಯೋಜಕರು ಅಲ್ಲಿಯೇ ಬಿಟ್ಟುಹೋಗಿದ್ದಾರೆ. ಉಳಿದ ಅನ್ನ, ಚಿಕನ್ ಎಲ್ಲವನ್ನು ನೆಲಕ್ಕೆ ಹಾಕಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
Home Loan: ನೀವು ಮನೆ ಖರೀದಿಗೆ ಯೋಚಿಸುತ್ತಿದ್ದೀರಾ.? ಈ ಬ್ಯಾಂಕ್ʼಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ..!
ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ದರು. ಹಸಿವಿನಿಂದ ಜನ ಇರಬಾರದು ಅಂತ ಹೇಳಿ ಬಿರಿಯಾನಿಯನ್ನು ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಅನ್ನವನ್ನು ನೆಲದ ಪಾಲು ಮಾಡಿರುವ ಆಯೋಜಕರ ವಿರುದ್ಧ ಜನಸಾಮನ್ಯರು ಕಿಡಿಕಾರಿದ್ದಾರೆ. ಉಳಿದ ಆಹಾರವನ್ನು ಅನಾಥಶ್ರಮ ಅಥವಾ ನಿರಾಶ್ರಿತರ ಕೇಂದ್ರಕ್ಕೆ ನೀಡದೇ ನೆಲದಪಾಲು ಮಾಡಿದ್ದು ವಿಪರ್ಯಾಸ ಅಸಮಾಧಾನ ಹೊರಹಾಕಿದ್ದಾರೆ.