ಚಿತ್ರದುರ್ಗ:- ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣಾದ ಹಿನ್ನೆಲೆ ಮನನೊಂದು ಗಂಡನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ಜರುಗಿದೆ.
ಬೆಂಗಳೂರಿನ ಪ್ರಯಾಣಿಕರೇ ಹುಷಾರ್: ಆಟೋದಲ್ಲಿ ಸಂಚರಿಸೋ ಮುನ್ನ ಈ ಸ್ಟೋರಿ ನೋಡಿ!
25 ವರ್ಷದ ಪ್ರವಲ್ಲಿಕ ಮೃತ ಗೃಹಿಣಿ.ಸುದರ್ಶನ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ. ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸುದರ್ಶನ್ ಅಸ್ವಸ್ಥಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಪತಿ ಸುದರ್ಶನ್ ರೆಡ್ಡಿ, ಮಾವ ಶಿವಾ ರೆಡ್ಡಿ, ಅತ್ತೆ ರಾಜೇಶ್ವರಿ ಹಾಗೂ ಮತ್ತಿತರೆ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ, ಸಿಪಿಐ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.