ಬೆಳಗಾವಿ : ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಹೋಗಿ ಆರು ಬಾಗಿಲುಗಳಾಗಿವೆ ಎಂದು ಲಕ್ಷ್ಮಣ ಸವದಿ ಲೇವಡಿ ಮಾಡಿದ್ದಾರೆ. ಇಂದು ಚಿಕ್ಕೋಡಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವ್ರು, ಬಿಜೆಪಿಯಲ್ಲಿ ಶ್ರೀರಾಮುಲು ಒಬ್ಬರದೆ ಸಮಸ್ಯೆ ಇಲ್ಲ, ಹಲವರದ್ದು ಸಮಸ್ಯೆಗಳಿವೆ. ಇತ್ತೀಚಿನ ದಿನಮಾನಗಳಲ್ಲಿ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಹೋಗಿ ಆರು ಬಾಗಿಲುಗಳಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.
ಶ್ರೀರಾಮುಲು ಕಾಂಗ್ರೆಸ್ಗೆ ಬರಲ್ಲ ; ಎಲ್ಲಾ ಊಹಾಪೋಹ ; ಸಚಿವ ಜಮೀರ್ ಅಹ್ಮದ್
ನಾವು ಹೊಸದಾಗಿ ಹೇಳುವಂತ ಪರಸ್ಥಿತಿ ನಿರ್ಮಾಣವಾಗಿದೆ. ಶ್ರೀರಾಮುಲು ಅವರಿಗೆ ಬಿಜೆಪಿಯಲ್ಲಿ ಬಹಳ ದಿನದಿಂದ ಇದ್ದ ಅಸಮಾಧಾನ ಈಗ ಭುಗಿಲೆದ್ದಿದೆ. ಪಾಪ ಶ್ರೀರಾಮುಲು ನೊಂದಿದ್ದಾರೆ, ಮನಸ್ಸಿಗೆ ಘಾಸಿಯಾಗಿದೆ. ನಾನೇನು ಶ್ರೀರಾಮುಲು ಅವರಿಗೆ ಸಂಪರ್ಕ ಮಾಡಿಲ್ಲ. ಉಪಚುನಾವಣೆ ಸಂದರ್ಭದಲ್ಲಿ ನನ್ನ ಸಂಪರ್ಕ ಬಂದಿದ್ದರು ಆದರೆ, ಅದು ಸ್ನೇಹದ ಸಂಪರ್ಕ ಆಗಿತ್ತು. ಮುಂದಿನ ದಿನಮಾನಗಳಲ್ಲಿ ಕಾದು ನೋಡೋಣ ಎಂದರು. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ದಾಟಿ ಆರು ಬಾಗಿಲಿಗೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದ ಹಾಗೆ ಕೆಲವರು ಬರುತ್ತಾರೆ. ಕೆಲವರು ಹೋಗತ್ತಾರೆ. ರಾಷ್ಟ್ರೀಯ ಪಕ್ಷಗಳಿಗೆ ವ್ಯಕ್ತಿಗತ ಪರಿಣಾಮ ಬೀರುವುದಿಲ್ಲ ಎಂದರು.