ಚಿಕ್ಕಮಗಳೂರು : ಲೋಕಸಭೆ ಕಲಾಪದಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನ ಪ್ರರ್ದರ್ಶನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ರಾಹುಲ್ ಗಾಂಧಿ ವಿಪಕ್ಷ ನಾಯಕ ಅನ್ನೋ ಜವಾಬ್ದಾರಿ ಮರೆತಿದ್ದಾರೆ. ಹಿಂದೂಗಳ ಮನಸ್ಸಿನಲ್ಲಿ ದ್ವೇಷ ಭಾವನೆ ಬಿತ್ತುವವರು ಇವರಾಗಿದ್ದಾರೆ.
ರಾತ್ರಿ 9 ಗಂಟೆಯ ನಂತ್ರ ಊಟ ಮಾಡ್ತೀರಾ..? ಹಾಗಿದ್ರೆ ಈ ಎಲ್ಲಾ ಸಮಸ್ಯೆಗಳು ಎದುರಾಗುವುದು ಗ್ಯಾರಂಟಿ
ಹಿಂದೂ ಧರ್ಮ ‘ಸರ್ವೇ ಜನ ಸುಖಿನೋಭವಂತು’ ಅನ್ನೋದನ್ನ ಪ್ರತಿಪಾದಿಸಿದೆ. ಹಿಂದೂ ಅನ್ನೋದು ವಿಶ್ವವೇ ಒಂದು ಕುಟುಂಬ ಅಂತ ಭಾವಿಸೋದು. ಹಿಂದೂ ಅನ್ನೋದು ಅಣುರೇಣು ತೃಣಕಾಷ್ಟಗಳಲ್ಲೂ ಭಗವಂತನನ್ನ ಕಾಣೋದು. ಹಿಂದೂ ಅನ್ನೋದು ಮನುಷ್ಯ ಮಾತ್ರವಲ್ಲ ಮರಗಿಡ-ಪ್ರಾಣಿಪಕ್ಷಿಯೂ ಚೆನ್ನಾಗಿರಬೇಕೆಂದು ಪ್ರಾರ್ಥಿಸೋದು ಆಗಿದೆ ಎಂದರು.