ಆನೇಕಲ್: ಕಾಡಾನೆಗಳ ಹಿಂಡು ರೈತನ ಹೊಲಕ್ಕೆ ನುಗ್ಗಿ ಬೆಳೆನಾಶ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮ ನಾಯಕನ ದೊಡ್ಡಿಯಲ್ಲಿ ನಡೆದಿದೆ .. ರಾಮ ನಾಯಕನ ದೊಡ್ಡಿ ಗ್ರಾಮದ ಕಬ್ಬಾಳ್ ನಾಯಕ್ ಮತ್ತು ರಾಮನಾಯಕ್ ಮತ್ತು ರಮೇಶ್ ನಾಯಕ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ವಾಗಿದೆ.
ಇನ್ನು ರಾಗಿ ಮೆದೆ , ತೆಂಗಿನ ಮರ, ಅವರೆಕಾಯಿ ತೊಗರಿಕಾಯಿ ಕೊಹ್ಲಿಗೆ ಬಂದಿದ್ದನ್ನ ತಿಂದು ಹಾಳು ಮಾಡಿದೆ ಸುಮಾರು 4 ಎಕರೆ ಜಾಗದಲ್ಲಿ ಬೆಳೆದಿದ್ದ ರಾಗಿ ತೊಗರಿಯನ್ನು 12ಕ್ಕೂ ಹೆಚ್ಚು ಕಾಡಾನೆ ಗಳು ತಿಂದು ಹಾಳು ಮಾಡಿದೆ. ಇನ್ನು ಒಂದು ವರ್ಷದಿಂದ ಕಷ್ಟಪಟ್ಟು ಸಾಲ ಸೊಲ ಮಾಡಿ ಬೆಳೆದಿದ್ದ ಬೆಳೆ ಕಾಡಾನೆಗಳ ಪಾಲಾಗಿದೆ.
Supreme Court Recruitment: ಸುಪ್ರೀಂ ಕೋರ್ಟ್ʼನಲ್ಲಿದೆ ಉದ್ಯೋಗಾವಕಾಶ! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಇದರಿಂದ ರೈತ ಕಂಗಲಾಗಿದ್ದಾನೆ ಇನ್ನು ಕಾಡಾನೆಯಿಂದಾಗಿ ಗ್ರಾಮಸ್ಥರು ಕೂಡ ಓಡಾಡಲು ಭಯಪಡುವಂತೆ ಪರಿಸ್ಥಿತಿ ಎದುರಾಗಿದೆ ಇನ್ನು ಕಾಡಾನೆಗಳ ಉಪಟಳದಿಂದಾಗಿ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ ಇನ್ನು ನಷ್ಟ ಪರಿಹಾರ ನೀಡುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ..