ಚಿಕ್ಕಬಳ್ಳಾಪುರ:- ರಕ್ಷಾರಾಮಯ್ಯ ಸ್ಥಳೀಯರಲ್ಲ ಎಂಬ ಸುಧಾಕರ್ ಹೇಳಿಕೆಗೆ ಸ್ವತಹ ರಕ್ಷಾ ರಾಮಯ್ಯ ಅವರೇ ಪ್ರತಿಕ್ರಿಯೆ ನೀಡಿ ಟಾಂಗ್ ಕೊಟ್ಟಿದ್ದಾರೆ.
ಅದ್ಯಾವ ಹಿನ್ನೆಲೆಯಲ್ಲಿ ಅವರು ತಾನು ಹೊರಗಿನವರ ಅಂತ ಹೇಳುತ್ತಾರೋ ಗೊತ್ತಿಲ್ಲ, ತಾನು ಬೆಳೆದಿದ್ದೆಲ್ಲ ದೇವನಹಳ್ಳಿ ತಾಲ್ಲೂಕಿನಲ್ಲಿ, ತಮ್ಮ ಮನೆಗಳು ಅಲ್ಲಿವೆ ಎಂದು ಹೇಳಿದರು. ವೀರಪ್ಪ ಮೊಯ್ಲಿ ಅವರ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದಾಗ ಅವರಿಗಾಗಿ ಕೆಲಸ ಮಾಡಿರುವುದಾಗಿ ಹೇಳಿದ ರಕ್ಷಾರಾಮಯ್ಯ, ಇಲ್ಲಿನ ಜನತೆಯೊಂದಿಗೆ ಒಟನಾಟವಿದೆ, ನಂಟಿದೆ, ಏನಾದರೂ ಕಾಮೆಂಟ್ ಮಾಡಬೇಕೆನ್ನುವ ಕಾರಣಕ್ಕೆ ಸುಧಾಕರ್ ಹಾಗೆ ಹೇಳಿದ್ದಾರೆ ಎಂದರು.
ಶೇಕಡ 60ರಷ್ಟಿರುವ ಯುವಕರೇ ಭಾರತದ ಭವಿಷ್ಯವಾಗಿದ್ದಾರೆ ಎನ್ನುವ ಅವರು ಯುವಕರಿಗೆ ಸೂಕ್ತ ಆದ್ಯತೆ ಮತ್ತು ಪ್ರಾಶಸ್ತ್ಯ ನೀಡಬೇಕು ಎಂದು ಅಭಿಪ್ರಾಯಪಡುತ್ತಾರೆ