ಮೈಸೂರು:- ಮಹಿಳೆಯರಿಗಿರುವ ಗ್ಯಾರಂಟಿ ಪುರಷರಿಗೆ ಯಾಕಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪದವೀಧರರಿಗೆ ಮೂರು ಸಾವಿರ, ಡಿಪ್ಲೋಮ ಪದವೀಧರರಿಗೆ ಒಂದೂವರೆ ಸಾವಿರ ಭಿಕ್ಷೆಯ ರೂಪದಲ್ಲಿ ನೀಡುತ್ತಿದ್ದೀರಾ?, ಪದವೀಧರರಿಗೆ ನಿಮ್ಮ ದುಡ್ಡು ಬೇಡ, ಬದಲಾಗಿ ಉದ್ಯೋಗ ನೀಡಿ.
ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ?, ಪದವೀಧರರ ಸಮಸ್ಯೆ ಆಲಿಸಲು ಓರ್ವ ಸಚಿವರನ್ನ ನೇಮಕ ಮಾಡಿ ಎಂದರು.
ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿಗಳು ಮಹಿಳೆಯರಿಗೆಯೇ ಇವೆ. ಆದರೆ, ಪುರುಷರಿಗೆ ಯಾಕೆ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ.