ಕೋಲಾರ: ಭೀಕರವಾಗಿ ಕೊಲೆಯಾಗಿದ್ದ ಬಾಲಕ ಕಾರ್ತಿಕ್ ಸಿಂಗ್ ಪ್ರಕರಣದ ತನಿಖೆ ಮುಂದುವರೆದಿದೆ. ತನಿಖೆ ವೇಳೆ ಹಂತಕರ ಹಲವು ವಿಕೃತ ಕೆಲಸಗಳು ಬೆಳಕಿಗೆ ಬಂದಿವೆ. ಬಾಲಕ ಕಾರ್ತಿಕ್ ದೇಹಕ್ಕೆ ಬರ್ಬರವಾಗಿ ಇರಿದ ಹಂತಕರು, ಆತ ನೋವಿನಿಂದ ನರಳುತ್ತಾ ಇರುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಬಾಲಕನ ಮೃತ ದೇಹದ ಮೇಲೆ ‘S’ ಮತ್ತು ‘R’ ಅಕ್ಷರಗಳನ್ನು ಚಾಕುವಿನಿಂದ ಬರೆದು ವಿಕೃತಿ ಮೆರೆದಿದ್ದರು.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಇನ್ನು 6 ಮಂದಿ ಹಂತಕರ ಪೈಕಿ ಮೂವರನ್ನು ಬಂಧಿಸಲಾಗಿದೆ.ಬಾಲಕ ಕಾರ್ತಿಕ್ ಸಿಂಗ್ ಕೊಲೆ ನಂತರವೂ ಹಂತಕರು ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಕಾರ್ತಿಕ್ ಸಿಂಗ್ ಕೊಲೆಗೈದು ದೇಹದ ಮೇಲೆ S ಹಾಗೂ R ಎಂದು ಬರೆದು ವಿಕೃತಿ ಮೆರೆದಿದ್ದು ತನಿಖೆ ವೇಳೆ ಬಯಲಾಗಿದೆ. ಕಾರ್ತಿಕ್ ಸಿಂಗ್ ಮುಖ, ಕತ್ತು, ಎದೆ ಭಾಗದ ಮೇಲೆ S ಎಂದು ಹಂತಕರು ಚಾಕುವಿನಲ್ಲೇ ಬರೆದಿದ್ದಾರೆ. ಇನ್ನು ಆತನ ಎದೆಯ ಮೇಲೆ ಒಂದು ಬಾರಿ R ಎಂದು ಬರೆಯಲಾಗಿದೆ.
ಕಾರ್ತಿಕ್ ಸಿಂಗ್ ಸಾವನ್ನಪ್ಪಿದ ನಂತರ, ಪದಗಳನ್ನು ಬರೆದಿರುವ ಮಾಹಿತಿ ಸಿಕ್ಕಿದೆ. ಅಂದಹಾಗೆ ಕೊಲೆಯ ಪ್ರಮುಖ ಆರೋಪಿಗಳಾದ ದಿಲೀಪ್ @ ಶೈನು ಹಾಗೂ ರಿಷಿಕ್ ಎನ್ನುವರ ಹೆಸರಿನ ಮೊದಲ ಅಕ್ಷರಗಳನ್ನ ಬರೆದಿರುವ ಶಂಕೆ ಇದೆ.ಕಾರ್ತಿಕ್ ಸಿಂಗ್ ಕೊಲೆ ಮಾಡಿದ ಬಳಿಕ ಅವರವರ ಮನೆಯಲ್ಲಿ ಊಟ ಮಾಡಿ, ಬಳಿಕ 7 ಮಂದಿ ಆರೋಪಿಗಳೂ ಪರಾರಿಯಾಗಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಇಬ್ಬರು ಆರೋಪಿಗಳನ್ನ ಬಂಧಿಸಿ, 7 ಮಂದಿಯನ್ನ ವಶಕ್ಕೆ ಪಡೆದು ಕೋಲಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.