ಮಹದೇವಪುರ:- ಕ್ಷೇತ್ರದ ಆದೂರು ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯನ್ನ ಗ್ರಾಮಸ್ಥರು ಹಾಗೂ ಪ್ರಜಾ ವಿಮೋಚನಾ ಚಳುವಳಿ ಸಂಘಟನೆಯ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳುವಳಿ ಸಂಘಟನೆಯ ಬೆಂಗಳೂರು ವಿಭಾಗಿಯ ಅಧ್ಯಕ್ಷ ದೇವರಾಜ್ ಮತನಾಡುತ್ತಾ ಡಾ.ಬಾಬಾಸಾಹೇಬ ಅಂಬೇಡ್ಕರರವರು ಮಾನವಕುಲದ ಶ್ರೇಷ್ಠ ಚಿಂತಕ, ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ ಇಂತಹ ಮಹಾನ್ ಚೇತನ ಈ ಜಗತ್ತಿನಲ್ಲಿ, ಅದರಲ್ಲೂ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿದ್ದ ಭಾರತದಲ್ಲಿ ಹುಟ್ಟಿದ್ದೇ ಒಂದು ಮಹಾ ವಿಷ್ಮಯ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ. ಇಂದು ದೇಶದ ಎಲ್ಲ ಜಾತಿಗಳ ಪ್ರತಿಯೊಬ್ಬರೂ ಕೂಡ ಡಾ.ಬಾಬಾಸಾಹೇಬ ಅಂಬೇಡ್ಕರರವರು ಮಾಡಿದ ಕೆಲಸದ ಫಲಾನುಭವಿಗಳಾಗಿದ್ದಾರೆ, ಅಷ್ಟೇ ಅಲ್ಲ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಮಹಿಳೆಯರಿಗೆ ಹಕ್ಕುಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣರಾದವರೇ ಅಂಬೇಡ್ಕರ್ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಅಧ್ಯಕ್ಷ ಗಣೇಶ್, ಚಂದ್ರಶೇಖರ್,ವೆಂಕಟೇಶ್, ಪಣತೂರ್ ವೆಂಕಟೇಶ್, ಮಂಜುನಾಥ್, ನಾರಾಯಣಸ್ವಾಮಿ ಹಿರಂಡಹಳ್ಳಿ ವೆಂಕಟಲಕ್ಷಮ್ಮ ಅನುರಾಧ ನಾರಾಯಣಮ್ಮ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.