ನವದೆಹಲಿ:- ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಭಾರತ ಸೇರಿ ವಿಶ್ವದಾದ್ಯಂತ ಸಂಭ್ರಮಾಚಾರಣೆ ಮುಗಿಲು ಮುಟ್ಟಿತ್ತು.
ಭಾರತವು ಸೇರಿದಂತೆ ವಿಶ್ವದಾದ್ಯಂತ ಜನರು 2023ಕ್ಕೆ ವಿದಾಯ ಹೇಳಿ 2024 ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಮೋಜು ಮಸ್ತಿಯಲ್ಲಿ ತೊಡಗಿ ಯುವ ಜನತೆ ಹುಚ್ಚೆದ್ದು ಕುಣಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಬೆಂಗಳೂರು, ದಿಲ್ಲಿ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಂಭ್ರಮದ ಕೇಕೆ ಮುಗಿಲು ಮುಟ್ಟಿತ್ತು. ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಗಲಾಟೆಗಳು ನಡೆದ ಬಗ್ಗೆ ವರದಿಯಾಗಿವೆ.
ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಹಲವರು ಗಣ್ಯರು ಎಕ್ಸ್ ವೇದಿಕೆಯಲ್ಲಿ ಹೊಸ ವರ್ಷದ ಆಗಮನದ ಶುಭಾಶಯಗಳನ್ನು ಕೋರಿದರು. ಅವರ ಟ್ವೀಟ್ಗಳು ಸಾಕಷ್ಟು ವೈರಲ್ ಕೂಡಾ ಆದವು. ಹಾಂಕಾಂಗ್, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಭರ್ಜರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು.