‘ಬಿಗ್ ಬಾಸ್’ 11ರ ಫಿನಾಲೆಗೆ ದಿನಗಣನೆ ಶುರುವಾಗಿದೆ. ಫಿನಾಲೆಗೆ ಯಾರು ಹೋಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಇದರ ಜೊತೆಗೆ ಸ್ಪರ್ಧಿಗಳಿಗೆ ನೇರವಾಗಿ ಫಿನಾಲೆ ತಲುಪಲು ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಲಾಗಿದೆ. ಟಿಕೆಟ್ ಟು ಫಿನಾಲೆ ರೇಸ್ನಲ್ಲಿ ಆಡಿ ಗೆದ್ದ ಒಬ್ಬ ಸ್ಪರ್ಧಿಗೆ ಫಿನಾಲೆ ಅಂಗಳಕ್ಕೆ ನೇರವಾಗಿ ಎಂಟ್ರಿ ಸಿಗಲಿದೆ. ಅದಕ್ಕಾಗಿ ಸ್ಪರ್ಧಿಗಳು ಸಖತ್ ಪೈಪೋಟಿ ನೀಡುತ್ತಿದ್ದಾರೆ.
ಇನ್ನೂ ಬಿಗ್ಬಾಸ್ ಸಖತ್ ಸ್ಟ್ರಾಂಗ್ ಆಗಿದ್ದ ಗೌತಮಿ ಹಾಗೂ ಉಗ್ರಂ ಮಂಜು ಟಿಕೆಟ್ ಟು ಫಿನಾಲೆಗೆ ಆಯ್ಕೆಯಾಗಿಲ್ಲ. ಹೌದು ನಿನ್ನೆ ಬಿಗ್ಬಾಸ್ ಎರಡು ತಂಡಕ್ಕೆ ಟಾಸ್ಕ್ವೊಂದನ್ನು ಕೊಟ್ಟಿದ್ದರು. ಒಬ್ಬೊಬ್ಬ ಸದಸ್ಯರು ಪೆಟ್ಟಿಗೆಯ ಒಳಗಡೆ ಮಲಗಬೇಕು. ಪೆಟ್ಟಿಗೆ ತುಂಬಾ ನೀರು ತುಂಬಲು ಶುರುವಾಗುತ್ತದೆ.
Fashion Tips: ನೈಲ್ ಪಾಲಿಶ್ ಹಚ್ಚಿದ ತಕ್ಷಣ ಒಣಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಇನ್ನೊಬ್ಬ ಸದಸ್ಯ ಪೆಟ್ಟಿಗೆ ಒಳಗಡೆ ತುಂಬಿದ ನೀರನ್ನು ಕಡಿಮೆಗೊಳಿಸುತ್ತಾ ಹೋಗಬೇಕು ಅಂತ ಟಾಸ್ಕ್ವೊಂದನ್ನು ಕೊಟ್ಟಿದ್ದರು. ಆಗ ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿ ಇದ್ದರು. ಭವ್ಯಾ ಗೌಡ ಹಾಗೂ ಮೋಕ್ಷಿತಾ ಮತ್ತೊಂದು ತಂಡದಲ್ಲಿ ಇರುತ್ತಾರೆ. ಈ ಟಾಸ್ಕ್ ಮೊದಲು ಮಂಜಣ್ಣ ಹಾಗೂ ಗೌತಮಿ ಚರ್ಚೆ ಮಾಡಿದ್ದರು. ನಾನು ಪೆಟ್ಟಿಗೆ ಒಳಗಡೆ ಇರುತ್ತೇನೆ. ನೀನು ನೀರು ತೇಗಿ ಅಂತ ಮಂಜಣ್ಣ ಹೇಳುತ್ತಾರೆ.
ಇದಾದ ಬಳಿಕ ಗೌತಮಿ ಚರ್ಚೆ ವೇಳೆಯೇ ನಾನು ಹೋಗುತ್ತೇನೆ, ನೀವು ನೀರನ್ನು ತೆಗೆಯಿರಿ ಅಂದಿದ್ದರು. ಆದರೆ ಮಂಜಣ್ಣ ನೀನು ನೀರು ತೆಗಿ, ನಾನು ಒಳಗಡೆ ಇರ್ತಿನಿ. ಸಾಯೋದಿಲ್ಲ ಬದುಕುತ್ತೇನೆ ಅಂತ ಹೇಳಿದ್ದರು. ಆದರೆ ಜಾಸ್ತಿ ಹೊತ್ತು ನೀರಲ್ಲಿ ಇರಲು ಆಗದೇ ಮಂಜಣ್ಣ ಪೆಟ್ಟಿಗೆಯಿಂದ ಆಚೆ ಬಂದು ಬಿಟ್ಟಿದ್ದಾರೆ. ಅಲ್ಲಿ ಈ ಟಿಕೆಟ್ ಟು ಫಿನಾಲೆ ಟಾಸ್ಕ್ ಆಡಲು ಅನರ್ಹ ರಾಗಿದ್ದಾರೆ ಗೌತಮಿ ಹಾಗೂ ಮಂಜು. ಟಾಸ್ಕ್ ಮುಗಿದ ಕೂಡಲೇ ಬಾತ್ ರೂಂಗೆ ಹೋದ ಗೌತಮಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.