ಬೆಂಗಳೂರು:- ನನ್ನ ಬೆತ್ತಲೆ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ.
ಬೆನ್ನುಮೂಳೆ ಇಲ್ಲದ ಗೃಹ ಸಚಿವ: ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ಟಾಂಗ್..!
ಈ ಸಂಬಂಧ ಇಂದು ಸುದ್ದಿಗೋಷ್ಠಿ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ಬಿಡುಗಡೆ ಬಳಿಕ ಹಲವು ರಾಜಕೀಯ ನಾಯಕರ ರಕ್ಷಣೆಯಾಗುತ್ತಿದೆ. ನಾನು ಸರ್ಕಾರಕ್ಕೆ ಚಾಲೆಂಜ್ ಹಾಕುತ್ತೇನೆ, ಯಾವುದೇ ಬೆದರಿಕೆಗೆ ನಾನು ಹೆದರಲ್ಲ, ಪ್ರಕರಣದಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.
ಇನ್ನು ಹಿಂದೆ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ಆದಾಗ ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದೆ ಆದರೆ ನ್ಯಾಯ ಸಿಗಲಿಲ್ಲ. ಈಗ ಅವರ ಪಕ್ಷದ ನಾಯಕರನ್ನೆ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ಪತ್ರವನ್ನ ಸಿಎಂ ಪುರಸ್ಕರಿಸುತ್ತಾರೆ. ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರೋದು ಘೋರ ಅಪರಾಧ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ನನ್ನ ಮೇಲೆ ದೂರು ಕೊಡುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
‘ನನ್ನ ಬೆತ್ತಲೆ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು. ಅದು ಕೂಡ ರಾಜಕೀಯ ಷಡ್ಯಂತ್ರ, ಈಗಾಗಲೇ ದೂರು ನೀಡಿದ್ದೇನೆ. ಆಗ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ ಪ್ರಜ್ವಲ್ ಪ್ರಕರಣದಲ್ಲಿ SIT ತನಿಖೆಗೆ ಕೊಟ್ಟ ನಂತರ FIR ಆಯ್ತು ಎಂದರು.
ನಾನು ಪೆನ್ ಡ್ರೈವ್ನ್ನ ದೇವರಾಜೇಗೌಡ ಕೊಟ್ಟಿದ್ದೆ ಎಂದು ಹೇಳಿದ್ದ ಕಾರ್ತಿಕ್, 4ಜಿಬಿ ಮೆಮೊರಿ ಕಾರ್ಡ್ ಕೊಟ್ಟಿದ್ದೆ ಎಂದು ಹೇಳಿದ್ದಾನೆ. ಆ 4ಜಿಬಿ ಕಾರ್ಡನ್ನ ಎಸ್ಐಟಿಗೆ ಕೊಟ್ಟಿರುವುದಾಗಿ ಕೂಡ ಹೇಳಿದ್ದಾನೆ. ಅಂತಹ ಕಾರ್ತಿಕ್ನನ್ನ ಎಸ್ಐಟಿ ಬಂಧಿಸ್ತಾ, ಇಲ್ಲ. ಇನ್ನು ನಿರೀಕ್ಷಣಾ ಜಾಮೀನು ವಜಾ ಆದ ತಕ್ಷಣ ರೇವಣ್ಣರನ್ನ ಬಂಧಿಸಿದ್ದೀರಿ. ಆದ್ರೆ, ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆದರೂ ಯಾಕೆ ಬಂಧಿಸಿಲ್ಲ. ಕೂಡಲೇ ಆತನನ್ನು ಬಂಧಿಸಲು ದೇವರಾಜೇಗೌಡ ಆಗ್ರಹಿಸಿದರು