ಬೆಂಗಳೂರು: ಆತ ಹೈಪೈ ಕಾರುಗಳನ್ನ ಟಾರ್ಗೆಟ್ ಮಾಡ್ತಿದ್ದ. ಕಾರಿನೊಳಗೆ ಹಿರಿಯ ನಾಗರಿಕರು ಇದ್ದರೆ ಮುಗಿತು. ಆಕ್ಸಿಡೆಂಟ್ ನೆಪದಲ್ಲಿ ಸುಲಿಗೆ ಮಾಡ್ತಿದ್ದ.. ಯಾರವನು ಏನಿದು ಸ್ಟೋರಿ ಅಂತೀರಾ.. ತೋರಿಸ್ತೀವಿ ನೋಡಿ ಯೆಸ್… ಒಮ್ಮೆ ಈತನನ್ನ ಸರಿಯಾಗಿ ನೋಡಿಕೊಂಡು ಬಿಡಿ. ಹೆಸರು ಜಾಮೀರ್ ಖಾನ್ ಅಂತಾ. ಮೂಲತಃ ಬೆಂಗಳೂರಿನ ನಿವಾಸಿ. ಹಣದ ದುರಾಸೆಗೆ ರಸ್ತೆಯಲ್ಲಿ ಕಾರಿನೊಳಗೆ ಹೋಗ್ತಿರೋ ಹಿರಿಯ ನಾಗರಿಕರನ್ನ ಟಾರ್ಗೆಟ್ ಮಾಡಿ ಹಿಂಬದಿಯಿಂದ ಹೋಗಿ ಬೈಕ್ ಟಚ್ ಮಾಡಿ ಗಲಾಟೆ ಮಾಡಿ ಹಣ ಸುಲಿಗೆ ಮಾಡ್ತಿದ್ದ. ಸದ್ಯ ಈತ ಜಯನಗರ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು.. ನವೆಂಬರ್ 14 ರಂದು ಕನಕಪುರ ರಸ್ತೆಯಲ್ಲಿ ಶ್ರೀನಿವಾಸ ಎನ್ನುವವರು ತಮ್ಮ ಪತ್ನಿ ಜೊತೆಗೆ ಕಾರಿನಲ್ಲಿ ಹೋಗ್ತಿದ್ದ ವೇಳೆ ಆರೋಪಿ ಹಿಂಬದಿ ಬಂದು ಕಾರಿಗೆ ಬೈಕ್ ಟಚ್ ಮಾಡಿದ್ದ. ಬಳಿಕ ಕಾರ್ ನಿಲ್ಲಿಸಿ ನಿಮ್ಮ ಕಾರ್ ನನ್ನ ಬೈಕ್ ಗೆ ಡಿಕ್ಕಿಯಾಗಿದೆ. ನನ್ನ ಮಗು ಸ್ಥಿತಿ ಗಂಭೀರವಾಗಿದೆ ಅದಕ್ಕೆ ಹಣ ನೀಡಬೇಕು ಅಂತಾ ಗಲಾಟೆ ಮಾಡಿದ್ದ…
ಇನ್ಮುಂದೆ Accident ಆದ್ರೆ ತಲೆ ಬಿಸಿ ಮಾಡ್ಕೊಬೇಡಿ..! ಮೋದಿ ಸರ್ಕಾರವೇ ಭರಿಸಲಿದೆ ಚಿಕಿತ್ಸಾ ವೆಚ್ಚ..!
ಹೀಗೆ ಹೆದರಿಸಿ, ಬೆದರಿಕೆ ಹಾಕಿ ಬಲವಂತವಾಗಿ 50 ಸಾವಿರ ಮತ್ತೊಮ್ಮೆ 40 ಸಾವಿರ ಸೇರಿದಂತೆ ಹಂತಹಂತವಾಗಿ ಒಂದು 1 ಲಕ್ಷಕ್ಕೂ ಅಧಿಕ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದ ಈ ಜಮೀಲ್ ಖಾನ್. ಇದರಿಂದ ನೊಂದ ಶ್ರೀನಿವಾಸ್ ಜಯನಗರ ಠಾಣೆಗೆ ದೂರು ನೀಡಲು ಹೋದಾಗ ಆರೋಪಿ ಇದೇ ರೀತಿ ಆಕ್ಸಿಡೆಂಟ್ ಹೆಸರಲ್ಲಿ ಹಣ ವಸೂಲಿ ಮಾಡ್ತಿದ್ದ ಅನ್ನೊ ವಿಚಾರ ಬೆಳಕಿಗೆ ಬಂದಿದೆ. ಇದರಂತೆ ಆರೋಪಿ 7 ಜನರಿಗೆ ನಕಲಿ ಅಪಘಾತದ ಹೆಸರಿನಲ್ಲಿ ಮೋಸ ಮಾಡಿ ಹಣ ಪೀಕಿದ್ದ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಈತನ ವಿರುದ್ಧ ನಗರದ ಬಸವನಗುಡಿ , ಚಂದ್ರ ಲೇಔಟ್, ಬನಶಂಕರಿ, ಸಿದ್ದಾಪುರ ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬೇರೆಬೇರೆ ಪ್ರಕರಣಗಳು ದಾಖಲಾಗಿವೆ. ಸದ್ಯ ಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಒಟ್ನಲ್ಲಿ ಹಣ ಮಾಡೋದಕ್ಕೆ ಎಂತಹ ಕೆಲಸಕ್ಕಾದ್ರೂ ಹಲವರು ಇಳಿತಾರೆ ಅನ್ನೋದಕ್ಕೆ ಈ ಆಸಾಮಿ ಉದಾಹರಣೆಯಾಗಿದ್ದು, ಜನ ಇಂತವರಿಂದ ಎಚ್ಚರಿಕೆಯಿಂದ ಇದ್ರೆ ಒಳಿತು.