ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲು ಬಳಿಕ ಭಾರತೀಯ ಆಟಗಾರರನ್ನು ವಿದೇಶಿ ಆಟಗಾರ ಅಣಕಿಸಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದ್ದಾರೆ. ಕಿವೀಸ್ ಸ್ಪಿನ್ನರ್ ವಿರುದ್ಧ ಭಾರತೀಯ ಬ್ಯಾಟರ್ಗಳು ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಕೂಡ ಪರದಾಡಿದರು.
ಟೀಮ್ ಇಂಡಿಯಾದ ಈ ಕಳಪೆ ಬ್ಯಾಟಿಂಗ್ ಬೆನ್ನಲ್ಲೇ ನ್ಯೂಝಿಲೆಂಡ್ನ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸೈಮನ್ ಡೌಲ್ ನೀಡಿದ ಹೇಳಿಕೆಯು ಇದೀಗ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಡೌಲ್ ಭಾರತೀಯ ಬ್ಯಾಟರ್ಗಳ ಸ್ಪಿನ್ ಬ್ಯಾಟಿಂಗ್ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ.
ಟೀಮ್ ಇಂಡಿಯಾ 156 ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆ ಮಾತನಾಡಿದ ಸೈಮನ್ ಡೌಲ್, ಭಾರತೀಯ ಬ್ಯಾಟರ್ಗಳು ಉತ್ತಮ ಸ್ಪಿನ್ ಆಟಗಾರರು ಎಂಬುದು ತಪ್ಪು ಕಲ್ಪನೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅಥವಾ ರಾಹುಲ್ ದ್ರಾವಿಡ್ ಯುಗ ಮುಗಿದು ಹೋಗಿದೆ. ಈಗ ಭಾರತೀಯ ಬ್ಯಾಟರ್ಗಳು ಕೂಡ ಬೇರೆ ದೇಶಗಳ ಬ್ಯಾಟ್ಸ್ಮನ್ಗಳಂತೆಯೇ ಸ್ಪಿನ್ ಬೌಲಿಂಗ್ ಮುಂದೆ ತಡಕಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತಮ ಸ್ಪಿನ್ನರ್ಗಳು ಬಂದ ತಕ್ಷಣ ಭಾರತೀಯ ಬ್ಯಾಟರ್ಗಳಿಗೆ ಸಮಸ್ಯೆಗಳು ಶುರುವಾಗುತ್ತವೆ. ಐಪಿಎಲ್ನಲ್ಲೂ ಇದೇ ರೀತಿ ಕಂಡುಬಂದಿದೆ. ಭಾರತ ತಂಡದ ಬ್ಯಾಟ್ಸ್ಮನ್ಗಳು ಸ್ವಿಂಗ್ ಮತ್ತು ಸೀಮ್ ಅನ್ನು ಸಹ ಆಡಲು ಸಾಧ್ಯವಿಲ್ಲ. ಇದೀಗ ಸ್ಪಿನ್ನರ್ಗಳ ವಿರುದ್ಧ ಕೂಡ ಆಡಲು ತಡಕಾಡುತ್ತಿದ್ದಾರೆ ಎಂದು ಸೈಮನ್ ಡೌಲ್ ವ್ಯಂಗ್ಯವಾಡಿದ್ದಾರೆ.