ಬೆಂಗಳೂರು:- ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ನಡೆದಿದ್ದು, ಚಿಕನ್ ಖರೀದಿಗೆ ಬಂದಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯೊಬ್ಬನನ್ನ ಕೊಲೆ ಮಾಡಲಾಗಿದೆ.
ನಮ್ಮದು ಒಂದೇ ಪ್ರಶ್ನೆ, ಮುಡಾ ನಿವೇಶನ ವಾಪಸ್ ಕೊಟ್ಟಿದ್ಯಾಕೆ!? ವಿಜಯೇಂದ್ರ!
ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಯಲ್ಲಿ 40 ವರ್ಷ ವಯಸ್ಸಿನ ಅಡಿಯಾಕೋ ಮಸಾಲಿಯೋ ಎಂಬಾತನನ್ನ ಕೊಲೆ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ನೈಜೀರಿಯಾ ಪ್ರಜೆ ಅಡಿಯಾಕೋ ಮಸಾಲಿಯೋ ಚಿಕನ್ ಸೆಂಟರ್ ವೊಂದರಲ್ಲಿ ಚಿಕನ್ ಖರೀದಿಗೆ ಹೋಗಿದ್ದ. ಈ ವೇಳೆ ಆತನ ದೈತ್ಯ ದೇಹ, ಆತನ ಓಡಾಟ ನೋಡಿ ಸ್ಥಳೀಯರು ಅನುಮಾಸ್ಪದವಾಗಿ ಓಡಾಡ್ತಿದ್ದಾನೆ ಅಂತಾ ತಡೆದು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಸ್ಥಳೀಯರಿಗೂ ದೈತ್ಯ ಪ್ರಜೆಗೂ ಗಲಾಟೆ ಶುರುವಾಗಿದೆ. ಗಲಾಟೆ ನಡುವೆ ಯಾಸೀನ್ ಖಾನ್ ಎಂಬಾತನಿಗೆ ಅಡಿಯಾಕೋ ಮಸಾಲಿಯೋ ಒಂದೆರಡೇಟು ಹೊಡೆದಿದ್ದ ಅದಕ್ಕೆ ಕೋಪಗೊಂಡಿದ್ದ ಯಾಸೀನ್ ಖಾನ್ ಅಲ್ಲಿಯೇ ಇದ್ದ ಮರದ ತುಂಡು ಒಂದನ್ನ ಕೈಗೆತ್ತಿಕೊಂಡವನೇ ಸೀದಾ ಅಡಿಯಾಕೋ ತಲೆಗೆ ಬಿಟ್ಟಿದ್ದಾನೆ. ನಂತರ ಗಲಾಟೆ ಜೋರಾಗಿದೆ, ಗಲಾಟೆ ನಡುವೆ ಬೆಳ್ಳಹಳ್ಳಿ ಬಂಡೆ ಬಳಿ ಹೋಗಿದ್ದ ಅಡಿಯಾಕೋ ಸುಸ್ಥಾಗಿ ಬಿದ್ದು ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.