ಬೇಲೂರು: ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು ಕಾಫಿ ತೋಟಕ್ಕೆ ತೆರಳಿದ್ದ ಕಾರ್ಮಿಕರು ಕೆಲಸ ಬಿಟ್ಟು ಮನೆಗೆ ವಾಪಾಸ್ಸಾಗಿದ್ದಾರೆ.ತಾಲ್ಲೂಕಿನ ತಗರೆ ಗ್ರಾಮದಲ್ಲಿ 25 ಕಾಡಾನೆಗಳು ಗೋಚರಿಸಿದ್ದು ಸಾಲಿನಲ್ಲಿ ತೆರಳುತ್ತಿದ್ದ ಆನೆಗಳ ಲೆಕ್ಕ ಹಾಕಿದ್ದಾರೆ ಸ್ಥಳೀಯರು.
ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ದಿನಗಣನೆ: ಮದುವಣ ಗಿತ್ತಿಯಂತೆ ಶೃಂಗಾರಗೊಂಡ ಬಸವ ಜನ್ಮ ಸ್ಥಳ!
ಆನೆಗಳ ಹಿಂಡು ರಸ್ತೆ ದಾಟುವಾಗ ವಾಹನ ಸವಾರರು ದೂರದಲ್ಲೇ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಗುಂಪಿನಲ್ಲಿ ಮರಿಗಳು, ಸಲಗಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಧೂಳೆಬ್ಬಿಸುತ್ತ ರಸ್ತೆ ದಾಟಿವೆ.
ಆನೆಗಳು ಗುಂಪುಗಟ್ಟಲೇ ಬಂದಿರುವ ಮಾಹಿತಿ ಅರಿತ ಕಾರ್ಮಿಕರು ಕೆಲಸ ಬಿಟ್ಟು ಮನೆಗೆ ವಾಪಾಸ್ಸಾಗಿದ್ದಾರೆ. ಮತ್ತೊಂದೆಡೆ ಇಟಿಎಫ್ ಸಿಬ್ಬಂದಿಯು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಅರಣ್ಯ ಇಲಾಖೆಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತಿದ್ದಾರೆ.