ಬೆಂಗಳೂರು:- ಕುಂಬಾರ್ ಪೇಟೆ ,ಡಿಎಸ್ ಲೇನ್ ,ಎಸ್ ಪಿ ರೋಡ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಗೋದಾಮುಗೆ ಬೆಂಕಿ ತಗುಲಿದೆ.
ಮಕ್ಕಳ ಆಟದ ಸಾಮಾನು,ಎಲೆಕ್ಟ್ರಾನಿಕ್ ವಸ್ತು ಇರೋ ಗೋಡೌನ್ ಇದಾಗಿದ್ದು, ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ಲಾಸ್ಟಿಕ್ ಗೋದಾಮುಗೆ ಬೆಂಕಿ ತಗುಲಿರೋ ಶಂಕೆ ವ್ಯಕ್ತವಾಗಿದ್ದು, ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ದಟ್ಟ ಹೊಗೆ ಹಾಗೂ ಬೆಂಕಿ ದತ್ತವಾಗಿದೆ. ಸ್ಥಳದಲ್ಲಿ ೫ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.