ಬೆಂಗಳೂರು: ಕಸ ಸರಿಯಾಗಿ ಎತ್ತುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕನಕಪುರ ರಸ್ತೆಯ ಫೋರಂ ಮಾಲ್ ನಲ್ಲಿ ಮಾರ್ಚ್ 8 ರಂದು ರಾತ್ರಿ 8 ಗಂಟೆಗೆ ನಡೆದಿದೆ. ಬಸವರಾಜು(37) ಮೃತ ವ್ಯಕ್ತಿಯಾಗಿದ್ದು,
ಮಾಯಪ್ಪ (60) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಬಸವರಾಜು ಮತ್ತು ಮಾಯಪ್ಪ ಫೋರಂ ಮಾಲ್ ನಲ್ಲಿ ಕಸ ಎತ್ತುವ ಕೆಲಸ ಕೆಲಸ ಮಾಡ್ತಿದ್ರು. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ.
ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು.? ಹೆಚ್ಚು ಕುಡಿದ್ರೆ ಏನಾಗುತ್ತೆ ಗೊತ್ತಾ.?
ಕಸ ಸರಿಯಾಗಿ ಎತ್ತು ಅಂತಾ ಬಸವರಾಜು ಮಾಯಪ್ಪಗೆ ಹೇಳಿದ್ದ, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನೂ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.