ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸೂರ್ ಸರ್ವಿಸ್ ರಸ್ತೆ ಸಿಂಗ್ರಸಂದ್ರ ಬಳಿ ನಡೆದಿದೆ.
ಜಗದೀಶ್ (40) ಕೊಲೆಯಾದ ದುರ್ಧೈವಿಯಾಗಿದ್ದು, ಸಿದ್ದೇಶ್ ಎಂಬ ವ್ಯಕ್ತಿಯಿಂದ ಕೊಲೆಯಾಗಿದೆ. ತಡರಾತ್ರಿ ಸಿಂಗಸಂದ್ರ ಬಳಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಲ್ಷಕ ಕಾರಣಕ್ಕೆ ಸಿದ್ದೇಶ್ ಹಾಗೂ ಜಗದೀಶ್ ನಡುವೆ ಗಲಾಟೆ ಮಾಡಿಕೊಂಡಿದ್ದಾರೆ.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಈ ವೇಳೆ ಜಗದೀಶ್ ಮೇಲೆ ಕಲ್ಲು ಎತ್ತಿ ಹಾಕಿ ಸಿದ್ದೇಶ್ ಕೊಲೆ ಮಾಡಿದ್ದಾನೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.