ಬಂಗಾರಪೇಟೆ – ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಎರಡು ಗ್ರಾಮದ ಯುವಕರ ನಡುವೆ ಹೊಡೆದಾಟ ಆಗಿದೆ. ಹಣಕಾಸು ವಿಚಾರಕ್ಕೆ ಕಿರಿಕ್ ಆಗಿದ್ದು, ನಡುರಸ್ತೆಯಲ್ಲಿ ಪರಸ್ಪರ ಕಿತ್ತಾಡಿ ಲಾಂಗ್ ಪ್ರದರ್ಶನ ಮಾಡಿ ಅಡ್ಡಾಡಿದ್ದಾರೆ.
IPL 2025: KKR ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: ತಂಡದಿಂದ ಆ್ಯಂಡ್ರೆ ರಸೆಲ್ ಔಟ್?
ಬಂಗಾರಪೇಟೆ ಜನರು ಬೆಚ್ಚಿಬಿದಿದ್ದು ಜೂನಿಯರ್ ಕಾಲೇಜು ಎದುರು ನಡೆದ ಘಟನೆಯಾಗಿದೆ. ದಾಸರಹೊಸಹಳ್ಳಿ ಇಬ್ಬರು ಯುವಕರು ಹಾಗೂ ದೇಶಿಹಳ್ಳಿ ಗ್ರಾಮದ ನಾಲ್ವರ ಮಧ್ಯೆ ಹೊಡೆದಾಟ ನಡೆದಿದೆ. ದೇಶಿಹಳ್ಳಿ ಯುವಕನೊಬ್ಬರಿಗೆ ೫೦ ಸಾವಿರ ಸಾಲವನ್ನು ಶ್ರೀಕಾಂತ್ ನೀಡಿದ್ದರು. ಸಾಲದ ಹಣ ಕೇಳಿದಕ್ಕೆ ಯುಬಕರ ಗುಂಪಿನಿಂದ ಶ್ರೀಕಾಂತ್ ಗೆ ಹಲ್ಲೆ ಮಾಡಲಾಗಿದೆ.
ಶ್ರೀಕಾಂತ್ ಗೆ ಥಳಿಸಿದಕ್ಕೆ ಬೇಸತ್ತ ಸಹೋದರ ತೇಜಸ್ ಲಾಂಗು ಹಿಡಿದು ಎದುರಾಳಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ರಸ್ತೆ ಮಧ್ಯೆ ಹಲ್ಲೆ ಮಾಡಿ ತೋರಿಸಿ ಎಚ್ಷರಿಸಿದ್ದಾನೆ. ಯುವಕರ ಮಧ್ಯೆ ಹೊಡೆದಾಟ ಹಾಗೂ ಲಾಂಗು ತೋರಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶ್ರೀಕಾಂತ್ ಹಾಗೂ ತೇಜಸ್ ಇಬ್ಬರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.