ಬೆಂಗಳೂರು: ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ವಾಟರ್ ಹೀಟರ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶ್ರೀನಿವಾಸ್ (45) ಕೊಲೆಯಾದ ದುರ್ದೈವಿಯಾಗಿದ್ದು, ನಾಗರಾಜ್ (36) ಸ್ನೇಹಿತನನ್ನೆ ಕೊಂದ ಆರೋಪಿಯಾಗಿದ್ದಾನೆ. ಇಬ್ಬರು ಕೂಡ ತಿ.ನರಸಿಪುರ ಮೂಲದವರಾಗಿದ್ದಾರೆ. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು.
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿ ರೂಮ್ ಬಾಡಿಗೆಗೆ ಪಡೆದು ವಾಸವಿದ್ದರು. ಮೃತ ಶ್ರೀನಿವಾಸ್ ಮದುವೆಯಾಗಿ ಪತ್ನಿಯನ್ನು ತೊರೆದು ವಾಸವಾಗಿದ್ದ. ರೂಮ್ನಲ್ಲಿ ಶ್ರೀನಿವಾಸ್ ಸದಾ ನಾಗರಾಜ್ನ ಮೊಬೈಲ್ ತೆಗೆದುಕೊಂಡು ಕಾಲಕಳೆಯುತ್ತಿದ್ದನಂತೆ. ಅಲ್ಲದೇ ರೂಮ್ನ ಕೀಯನ್ನು ನಾಗರಾಜ್ಗೆ ಕೊಡುತ್ತಿರಲಿಲ್ಲವಂತೆ.
Health Tips: ಚಳಿಗಾಲದಲ್ಲಿ ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?
ಇದೇ ವಿಚಾರಕ್ಕೆ ಡಿಸೆಂಬರ್ 26ರಂದು ಮಧ್ಯಾಹ್ನ ರೂಮ್ನಲ್ಲಿದ್ದ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಸಿಟ್ಟಿಗೆದ್ದ ನಾಗರಾಜ್ ವಾಟರ್ ಹೀಟರ್ ಕಾಯಿಲ್ನಿಂದ ಶ್ರೀನಿವಾಸ್ಗೆ ಹೊಡೆದಿದ್ದ. ಆಂತರಿಕ ನೋವಿನಿಂದ ಬಳಲುತ್ತಲೇ ಶ್ರೀನಿವಾಸ್ ರಾತ್ರಿ ಮಲಗಿದ್ದ.
ಬೆಳಿಗ್ಗೆ ಎದ್ದು ನೋಡಿದಾಗ ಶ್ರೀನಿವಾಸ್ ಸಾವನ್ನಪ್ಪಿದ್ದನ್ನು ಕಂಡ ನಾಗರಾಜ್ ಮನೆ ಬಿಟ್ಟು ತೆರಳಿದ್ದ. ಇಬ್ಬರೂ ಕೆಲಸಕ್ಕೆ ಬರದಿದ್ದಾಗ ರೂಮ್ ಮಳಿ ಮೇಸ್ತ್ರಿ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪರಾರಿಯಾಗಿದ್ದ ಆರೋಪಿ ಬಂಧಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಿ.ಕೆ ಅಚ್ಚುಕಟ್ಟು ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.