ಅವರಿಬ್ರು ದೂರದ ಊರಿಂದ ಬೆಂಗಳೂರಿಗೆ ಹೊಟ್ಟೆ ಪಾಡಿಗಾಗಿ ಬಂದು ಜೀವ್ನ ಮಾಡ್ತಿದ್ರು. ಆಟೋ ಓಡಿಸುತ್ತಿದ್ದ ಇವರು ಒಳ್ಳೆಯ ಸ್ನೇಹಿತರು ಕೂಡ ಆಗಿದ್ದರು. ಆದರೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ ಅಂತೀರಾ. ಈ ಸ್ಟೋರಿ ನೋಡಿ.
ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈತನ ಹೆಸರು ಜಗದೀಶ್ ಹೊಟ್ಟೆ ಪಾಡಿಗಾಗಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅದ್ರೆ ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ.ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಜಗದೀಶ್ ಗೆ ಸಿದ್ದೇಶ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು.
ಇತ್ತೀಚಿಗೆ ಇವರಿಬ್ಬರೂ ಪ್ರಾಣ ಸ್ನೇಹಿತರಂತೆ ಪ್ರತಿದಿನವೂ ಕೆಲಸ ಮುಗಿದ ಮೇಲೆ ಜೊತೆಯಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡಿ ಮನೆಗೆ ಹೋಗುತ್ತಿದ್ದರು. ಅದೇ ರೀತಿ ನೆನ್ನೆ ರಾತ್ರಿ ಸಹ ಎಣ್ಣೆ ಪಾರ್ಟಿ ಮಾಡಲು ಸಮೀಪದಲ್ಲೇ ಇದ್ದ ತಿರುಮಲ ಬಾರ್ ಗೆ ಹೋಗಿ ಕುಡಿದು ತಿಂದಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.ಆದರೆ ಸಿದ್ದೇಶ ಕುಡಿದ ನಶೆಯಲ್ಲಿ ಕೆಳಕ್ಕೆ ಬಿದ್ದಿದ್ದ ಜಗದೀಶನ ತಲೆಯ ಮೇಲೆ ಅಲ್ಲೆ ಪಕ್ಕದಲ್ಲಿ ಇದ್ದ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಇನ್ನು ಜಗದೀಶ್ ಹಾಗೂ ಸಿದ್ದೇಶ್ ಇಬ್ಬರೂ ಕೂಡ ತಮಿಳುನಾಡಿನವರು. ಹಲವು ವರ್ಷಗಳ ಹಿಂದೆಯೆ ಸಿಂಗಸಂದ್ರಕ್ಕೆ ಬಂದು ನೆಲೆಸಿದ್ರು.ಇಬ್ಬರೂ ಆಟೋ ಓಡಿಸಿಕೊಂಡು ಗಟ್ಟಿ ಗೆಳೆತನ ಬೆಳೆಸಿಕೊಂಡಿದ್ರು.ಅದ್ಯಾವ ವಿಚಾರಕ್ಕೆ ಸಿದ್ದೇಶ್ ಮತ್ತು ಜಗದೀಶ್ ನಡುವೆ ಜಗಳ ಶುರುವಾಯ್ತೋ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ನು ಪರಪ್ಪನ ಅಗ್ರಹಾರ ಪೊಲೀಸರು ಈಗಾಗಲೇ ಕೊಲೆ ಆರೋಪಿ ಸಿದ್ದೇಶ್ ನನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ…
ಒಟ್ನಲ್ಲಿ ಬದುಕು ಕಟ್ಟಿಕೊಳ್ಳಲು ಬಂದು ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಗೆಳೆಯರಲ್ಲಿ ಇದೀಗ ಒಬ್ಬ ಸಾವನಪ್ಪಿದ್ದು ಮತ್ತೊಬ್ಬ ಜೈಲು ಪಾಲಾಗಿದ್ದಾನೆ. ಕಾರಣ ಅದೇನೇ ಇರಲಿ ಇದೀಗ ಜಗದೀಶ್ ನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕುಡಿದು ಪಾರ್ಟಿ ಮಾಡೋ ಮುಂಚೆ ಇಂತಹ ಘಟನೆಗಳು ನೆನಪಸಿಕೊಂಡು ಎಚ್ಚರವಾಗಿರೋದು ಒಳ್ಳೆದು.