ಚಾಮರಾಜನಗರ:- ಚರಂಡಿ ಸ್ವಚ್ಚತೆ ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ರೈತ ಪತ್ರ ಬರೆದ ಘಟನೆ ಜರುಗಿದೆ.
ಬೇಗೂರು ಗ್ರಾಮಪಂಚಾಯ್ತಿ ಪಿಡಿಓ ನಿರ್ಲಕ್ಷ್ಯದಿಂದ ಬೇಸತ್ತ ರೈತನಿಂದ ಸಿ.ಎಂ.ಗೆ ಪತ್ರ ಬರೆಯಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಘಟನೆ ಜರುಗಿದೆ. ಬೇಗೂರು ಗ್ರಾಮಪಂಚಾಯ್ತಿ ವಿರುದ್ದ ರೈತ ಬೇಗೂರು ಗ್ರಾಮದ ವಾಸಿ ಮರಿಶೆಟ್ಟಿ ಆರೋಪ ಮಾಡಿದ್ದು, ಚರಂಡಿಯ ಅವ್ಯವಸ್ಥೆಯ ಸರಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಪಿಡಿಓ ನಿರ್ಲಕ್ಷ್ಯತನಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.
ಮನೆಯ ಸುತ್ತ ಅಶುಚಿತ್ವ ತಾಂಡವ, ರೋಗರುಜಿನಿಗಳು ಹರಡುವ ಭೀತಿ ಎಂಬ ಆತಂಕ ಉಂಟು ಮಾಡಿದ್ದು, ಸ್ವಚ್ಛತೆ ಮಾಡಿಸಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರೊಬ್ಬರು ಪತ್ರ ಬರೆದಿರುವ ಘಟನೆ ನಡೆದಿದೆ.