ಹಾವೇರಿ: ನಗು ಮೊಗದ ದೊರೆ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಅಪ್ಪು. ನಮ್ಮನ್ನಗಲಿ 3 ವರ್ಷಗಳೇ ಕಳೆದಿವೆ. ಆದರೂ ಕೂಡ ಜನರ ಮನದಲ್ಲಿ ಅಪ್ಪು ಅಜರಾಮರ. ಇಲ್ಲೊಬ್ಬ ಅಭಿಮಾನಿ ಪುನೀತ್ ರಾಜ್ಕುಮಾರ್ಗಾಗಿ ದೇಗುಲವನ್ನೇ ನಿರ್ಮಿಸಿದ್ದಾನೆ. ಹಾವೇರಿ ತಾಲೂಕಿನ ಯಲಗಚ್ಚು ಗ್ರಾಮದ ಪ್ರಕಾಶ್ಗೆ ಪುನೀತ್ ಅಂದ್ರೆ ಪಂಚಪ್ರಾಣ.
ಹೀಗಾಗಿ ಅವರ ದೇಗುಲವನ್ನೇ ನಿರ್ಮಿಸಿದ್ದಾನೆ. ಇಂದು ದೇವಸ್ಥಾನದ ಉದ್ಘಾಟನೆ ನಡೆಯಲಿದೆ. ದೇವಸ್ಥಾನದ ಉದ್ಘಾಟನೆಗೆ ದೊಡ್ಮನೆ ಸೊಸೆ, ಪುನೀತ್ ರಾಜಕುಮಾರ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುನೀತ ರಾಜಕುಮಾರ್ ಫೈಬರ್ ಪುತ್ಥಳಿಯನ್ನು ಅಶ್ವಿನಿ ಉದ್ಘಾಟನೆ ಮಾಡಲಿದ್ದಾರೆ. 9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ದೇವಾಲಯವಾಗಿದೆ.
ಸ್ಯಾಂಡಲ್ವುಡ್ನಲ್ಲಿ ಎಲ್ಲರ ಮೆಚ್ಚಿನ ನಟನಾಗಿ ಮಿಂಚುತ್ತಿದ್ದ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ 3 ವರ್ಷಗಳೇ ಕಳೆದಿವೆ. ಡಾ. ರಾಜ್ಕುಮಾರ್ ರೀತಿಯೇ ಪುನೀತ್ ರಾಜ್ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದರು. ಅಪ್ಪು ಕಣ್ಣಿನಿಂದ ಒಟ್ಟು 10 ಜನರಿಗೆ ದೃಷ್ಟಿ ನೀಡಲಾಗಿದೆ.