ಮದುವೆಗೆ ವಯಸ್ಸಿಲ್ಲ ಅನ್ನೋದು ಇತ್ತೀಚೆಗೆ ಹೆಚ್ಚಾಗಿದೆ. ಅದರಲ್ಲೂ ಸೆಲೆಬ್ರಿಟಿಗಳು ಮದುವೆ ಆಗೋದು, ಡಿವೋರ್ಸ್ ನೀಡೋದು ಕಾಮನ್ ಅನ್ನೋ ಹಾಗಾಗಿದೆ. ಇದೀಗ ೬೬ನೇ ವಯಸ್ಸಿನಲ್ಲಿ ಖ್ಯಾತ ಗಾಯಕ ಲಕ್ಕಿ ಅಲಿ ನಾಲ್ಕನೇ ಬಾರಿಗೆ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.
ಲಕ್ಕಿ ಅಲಿ ಇತ್ತೀಚೆಗೆ ದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆದ 18ನೇ ಕಥಾಕರಣ್ ಅಂತರರಾಷ್ಟ್ರೀಯ ಕಥೆಗಾರರ ಉತ್ಸವದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಲಕ್ಕಿ ಅಲಿ ನಾಲ್ಕನೇ ಬಾರಿಗೆ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದನು. ಅವರ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.
‘ಮತ್ತೆ ಮದುವೆಯಾಗುವುದು ನನ್ನ ಕನಸು’ ಎಂದು ಲಕ್ಕಿ ಅಲಿ ಹೇಳಿದರು. ಲಕ್ಕಿ ಅಲಿ ಮೂರು ಬಾರಿ ವಿವಾಹವಾದರು. ಆದರೆ ಮೂವರು ಹೆಂಡತಿಯರೊಂದಿಗಿನ ಅವರ ಸಂಬಂಧಗಳು ಹೆಚ್ಚು ಕಾಲ ಉಳಿಯಲಿಲ್ಲ. ಇದೀಗ ನಾಲ್ಕನೇ ಭಾರಿಗೆ ಮತ್ತೆ ಮದುವೆಯಾಗೋ ಮನಸ್ಸು ಮಾಡಿದ್ದಾರೆ.
ಮೊದಲು ಆಸ್ಟ್ರೇಲಿಯಾದ ನಿವಾಸಿ ಜೊತೆ ಮದುವೆಯಾಗಿದ್ದರು. ಆದ್ರೆ ಆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 2000 ರಲ್ಲಿ ಅನಾಹಿತಾ ಎಂಬ ಪಾರ್ಸಿ ಮಹಿಳೆಯನ್ನು ವಿವಾಹವಾದರು. ಲಕ್ಕಿ ಅಲಿ ಜೊತೆಗಿನ ವಿವಾಹಕ್ಕಾಗಿ ಅನಾಹಿತಾ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ಇನಾಯಾ ಎಂದು ಬದಲಾಯಿಸಿಕೊಂಡರು. ಈ ಮದುವೆಯಿಂದ ಲಕ್ಕಿ ಅಲಿಗೂ ಇಬ್ಬರು ಮಕ್ಕಳಿದ್ದರು. ಆದ್ರೆ ಬಳಿಕ ಇಬ್ಬರು ದೂರ ದೂರವಾದರು. 2010ರಲ್ಲಿ ಕೇಟ್ ಎಲಿಜಬೆತ್ ಹಲ್ಲಮ್ ಅವರನ್ನು ಮದುವೆಯಾದ ಲಕ್ಕಿ ಅಲಿ 2017ರಲ್ಲಿ ವಿಚ್ಛೇದನ ಪಡೆದರು. ಈದೀಗ ತಮ್ಮ ೬೬ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗೋ ನಿರ್ಧಾರ ಮಾಡಿದ್ದಾರೆ.