ಬೆಂಗಳೂರು: ಇನ್ಸ್ಟಾಗ್ರಾಂನಲ್ಲಿ ಸುಳ್ಳು ಆರೋಪ ಮಾಡ್ತಿದ್ದರೆಂದು ಕನ್ನಡದ ಪ್ರಖ್ಯಾತ ಧಾರಾವಾಹಿ ನಿರ್ದೇಶಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು ರಾಮಾಚಾರಿ ಧಾರಾವಾಹಿ ನಿರ್ದೇಶಕ ಕೆ.ಎಸ್ ರಾಮ್ ಜೀ ಅವರು, ನಿರ್ದೇಶಕರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದರೆಂದು ನಕಲಿ ಖಾತೆಯಿಂದ ಫೋಸ್ಟ್ ಮಾಡುತ್ತರುವ ಸಂಬಂಧ ದೂರು ನೀಡಿದ್ದಾರೆ.
Job Search: ಹೈಕೋರ್ಟ್ʼನಲ್ಲಿ ಭರ್ಜರಿ ಉದ್ಯೋಗಾವಕಾಶ..! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಬೆಂಗಳೂರು ಪಶ್ಚಿಮ ಸಿಇಎನ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಜನವರಿ 24ರಂದು ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ರಾಮ್ ಜೀ ಫೋಟೋ ಬಳಸಿರುವ ಕಿಡಿಗೇಡಿಗಳು, ಅವರ ವಿರುದ್ಧ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ.
ಈ ರೀತಿ ಸುಳ್ಳು ಆರೋಪ ಮಾಡುತ್ತಿರುವ ಖಾತೆ ಸೃಷ್ಟಿಸಿರುವ ಅಪರಿಚಿತನನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ರಾಮ್ ಜೀ ದೂರಿನಲ್ಲಿ ಒತ್ತಾಯಿಸಿದ್ದಾರೆ. ರಾಮಾಚಾರಿ, ಮಂಗಳಗೌರಿ ಮದುವೆ, ನಾಗಿಣಿ 2 ಸೇರಿ 16 ಧಾರಾವಾಹಿಗಳ ನಿರ್ದೇಶನ ಮಾಡಿದ್ದಾರೆ.