ಥಾಯ್ಲೆಂಡ್: ಸಮುದ್ರದ ತೀರದಲ್ಲಿನ ಬಂಡೆಗಳ ಮೇಲೆ ಕುಳಿತು ಪ್ರಾಣಾಯಾಮ ಸೇರಿದಂತೆ ಯೋಗಾಭ್ಯಾಸ ಮಾಡುತ್ತಿದ್ದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ಭೀಕರ ಸಮುದ್ರದ ಅಲೆಗಳಿಗೆ ಬಲಿಯಾಗಿದ್ದಾರೆ.
ನೋಡ ನೋಡುತ್ತಿದ್ದಂತೆ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ಅವರಿಗೆ ಅಪ್ಪಳಿಸಿದೆ. ಪರಿಣಾಮ ಆಕೆ ಅಲೆಗಳ್ಲಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದು ಥಾಯ್ಲೆಂಡ್ನ ಕೊಹ್ ಸಮುಯಿ ದ್ವೀಪದಲ್ಲಿ ಘಟನೆ ನಡೆದಿದೆ.
24 ವರ್ಷದ ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ದುರಂತ ಅಂತ್ಯಕಂಡಿದ್ದಾಳೆ. ನಟಿಯ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಕ್ಯಾಮಿಲ್ಲಾ ಯೋಗ ಮಾಡುತ್ತಿದ್ದಾರೆ. ಇದರಿಂದ ತನ್ನ ಜೀವನ ಸಂಪೂರ್ಣ ಬದಲಾಗಿರುವುದಾಗಿ ಕ್ಯಾಮಿಲ್ಲಾ ಹೇಳಿಕೊಂಡಿದ್ದರು. ರಷ್ಯಾ ನಟಿ ಕ್ಯಾಮಿಲ್ಲಾ ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಈ ಘಟನೆ ನಡೆದಿದೆ.