ತಮಿಳಿನ ಖ್ಯಾತ ನಟ ನೆಪೋಲಿಯನ್ ತಮ್ಮ ವಿಕಲ ಚೇತನ ಮಗನಿಗೆ ಅದ್ದೂರಿಯಾಗ ಮದುವೆ ಮಾಡಿದ್ದಾರೆ. ಜಪಾನ್ ನಲ್ಲಿ ನಡೆದ ಈ ಅದ್ದೂರಿ ಮದುವೆಯಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ನೆಪೋಲಿಯನ್ ಪುತ್ರ ಧನುಷ್ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೈ ಕಾಲಿನ ಸ್ವಾದೀನ ಕಳೆದುಕೊಂಡಿರುವ ಧನುಷ್ ವೀಲ್ ಚೇರ್ ನಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇದೀಗ ನಟ ನೆಪೋಲಿಯನ್ ಮಗನಿಗೆ ತಿರುನಲ್ವೇಲಿಯ ಅಕ್ಷಯ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದಾರೆ.
ಕಾಲಿವುಡ್ ಸ್ಟಾರ್ ಅನೇಕ ನಟ-ನಟಿಯರು ಹಾಗೂ ಗಣ್ಯರು ನವದಂಪತಿಗೆ ಶುಭಕೋರಿದ್ರು. ಧನುಷ್ಗೆ ಬಾಲ್ಯದಿಂದಲೂ ಜಪಾನ್ಗೆ ಭೇಟಿ ನೀಡುವ ಕನಸು ಇತ್ತಂತೆ. ಹೀಗಾಗಿ ನೆಪೋಲಿಯನ್ ತನ್ನ ಮಗನಿಗೆ ಜಪಾನ್ನಲ್ಲೇ ಮದುವೆ ಮಾಡಿಸಿದ್ದು ಈ ಮೂಲಕ ಮಗನ ಕನಸನ್ನು ನನಸು ಮಾಡಿದ್ದಾರೆ.
ಸದ್ಯ ಈ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನೇಕ ಸಿನಿ ಗಣ್ಯರು, ಅಭಿಮಾನಿಗಳು ಮತ್ತು ನೆಟಿಜನ್ಗಳು ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಈ ಮದುವೆಯ ಬಗ್ಗೆ ಕೆಲವರು ನಾನಾ ಕಮೆಂಟ್ ಕೂಡ ಮಾಡಿದ್ದಾರೆ. ಏಕೆಂದರೆ ಧನುಷ್ ಬಾಲ್ಯದಿಂದಲೂ ಮಸ್ಕ್ಯುಲರ್ ಡಿಸ್ಟ್ರೋಫಿ (ಸ್ನಾಯು ದೌರ್ಬಲ್ಯ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಡೀ ದೇಹ ಕೂಡ ಚಲಿಸಲು ಆಗಲು. ಅಂದಿನಿಂದ ಅವರು ವೀಲ್ಹ್ ಚೇರ್ ನಲ್ಲಿ ಇದ್ದಾರೆ. ಆದರೆ ಈಗ ಇವರಿಗೆ ಮದುವೆ ಮಾಡಿಸಿದ ವಿಚಾರದ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ.
‘ನನಗೆ ಹಣ ಮತ್ತು ಸಂಪತ್ತಿನ ಬಗ್ಗೆ ಕಾಳಜಿ ಇಲ್ಲ. ನಾನು ನನ್ನ ಮಗನ ಭವಿಷ್ಯದ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಸ್ನಾಯು ದೌರ್ಬಲ್ಯ ಹೊಂದಿರುವ ಜನರು ಮದುವೆಗೆ ಅನರ್ಹರು ಎಂಬುದು ನಿಜವಲ್ಲ. ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಕೆಲವರು ಈಗಾಗಲೇ ಮದುವೆಯಾಗಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ’ ಎಂದು ನೆಪೋಲಿಯನ್ ಹೇಳಿದ್ದಾರೆ. ‘ಧನುಷ್ಗೆ ಚಿಕಿತ್ಸೆ ನೀಡಿದ ಡೇನಿಯಲ್ ಹೇಳಿದ ನಂತರವೇ ನಾನು ನನ್ನ ಮಗನಿಗೆ ಮದುವೆ ಮಾಡಿಸಿದೆ ಎಂದು ನಟ ಹೇಳಿಕೊಂಡಿದ್ದಾರೆ.