ಗದಗ:- ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ದೊಡ್ಡ ಪ್ರಮಾಣದಲ್ಲಿ ಬೇರು ಬಿಟ್ಟಿದೆ. ಪೊಲೀಸರು ಚಾಪೆ ಕೆಳಗೆ ನುಸಿಳಿದರೆ, ಬಡ್ಡಿಕೋರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಈ ದಂಧೆಕೋರರ ಕಾಟಕ್ಕೆ ಅದೆಷ್ಟೋ ಜನರು ಜೀವವನ್ನೇ ಕಳೆದುಕೊಂಡಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರಿಗೆ ಪೊಲೀಸರು ಅದೆಷ್ಟೇ ಬಿಸಿ ಮುಟ್ಟಿಸಿದರೂ ಈ ದಂಧೆಗೆ ಫುಲ್ ಸ್ಟಾಪ್ ಮಾತ್ರ ಬೀಳುತ್ತಿಲ್ಲ. ಜನರಿಗೆ ವಿವಿಧ ರೀತಿಯ ಆಮಿಷವನ್ನ ನೀಡಿ, ಅವರಿಗೆ ಮೀಟರ್ ಬಡ್ಡಿಯಲ್ಲಿ ಹಣ ನೀಡುತ್ತಿದ್ದಾರೆ. ಬಡ್ಡಿ ಕಟ್ಟದೆ ಹೋದರೆ ಧಮ್ಕಿ ಹಾಕಿ ಅವರ ಮೇಲೆ ಹಲ್ಲೆ ಮಾಡುವಂತಹ ಬೆದರಿಕೆ ಕೂಡ ಹಾಕುತ್ತಿದ್ದಾರೆ
ಅದರಂತೆ ಮೀಟರ್ ಬಡ್ಡಿ ಧಂದೆಯ ಕಿರುಕುಳ ತಾಳಲಾರದೆ ಇಡೀ ಕುಟುಂಬವೇ ಊರು ಬಿಟ್ಟಿರುವ ಘಟನೆ ಗದಗ ಜಿಲ್ಲೆಯಲ್ಲಿ ಜರುಗಿದೆ.
ಹೌದು, ಬಡ್ಡಿ ದಂಧೆಕೋರರು, ಪರಶುರಾಮ ಹಬೀಬ್ ಎಂಬುವವರ ಬಳಿ 50 ಸಾವಿರ ರೂಪಾಯಿ ಸಾಲಕ್ಕೆ 1 ಲಕ್ಷ 50 ರೂಪಾಯಿ ಬಾಂಡ್ ಮಾಡಿಸಿಕೊಂಡಿದ್ದಾರಂತೆ. ಹೀಗಾಗಿ ಒಂದು ಸಾಲ ತೀರಿಸೋಕೆ ಹೋಗಿ ಮತ್ತೊಂದು ಕಡೆ ಚಕ್ರ ಬಡ್ಡಿಗೆ ಸಾಲ ಮಾಡಿಕೊಂಡು ಇಡೀ ಕುಟುಂಬದ ಜೊತೆಗೆ ಇಡೀ ಊರನ್ನೇ ಬಿಟ್ಟು ಹೋಗಿದ್ದಾರೆ. ಅಲ್ಲದೇ ಬಡ್ಡಿದಾರರ ಕಿರುಕುಳಕ್ಕೆ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಆದರೆ ಮಕ್ಕಳ ಮುಖ ನೋಡಿ, ಆತ್ಮಹತ್ಯೆ ಮಾಡಿಕೊಳ್ಳೋದನ್ನು ಬಿಟ್ಟಿದೇನೆ ಎಂದು ನಿಗೂಢ ಸ್ಥಳದಿಂದ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ.
ಪರಶುರಾಮ ಹಬೀಬ್ ಹಲವಾರು ಕಡೆ ಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರಂತೆ. ಬಡ್ಡಿ ದಂಧೆಕೋರರು ಕಿರುಕುಳಕ್ಕೆ ಬೆಸತ್ತು ಕ್ಯಾಂಟೀನ್ಗೆ ಬೀಗ ಹಾಕಿ ಜೀವ ಭಯದಿಂದ ಕುಟುಂಬ ಸಮೇತ ಊರು ಬಿಟ್ಟ ಹೋಗಿದ್ದಾರೆ.
ಅಸಲಿ ವಿಚಾರ ಏನೆಂದರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಪೇದೆಯ ಗಂಡನಿಂದಲೇ ಕಿರುಕುಳ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿಯಾದರೂ ದುಡ್ಡು ವಸೂಲಿ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕೊಟ್ಟಿರುವ ಕವಡೆ ಕಾಸಿಗೆ ಲಕ್ಷ ಲಕ್ಷ ಬಡ್ಡಿ ಹಾಕಿ ಕಿರುಕುಳ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಜೀವ ಭಯದಿಂದ ಪರಶುರಾಮ ಕುಟುಂಬ ಊರು ತೊರೆದಿದೆ.
.