ದೊಡ್ಡಬಳ್ಳಾಪುರ :- ಪಾಪಿಯಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ, ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ ಎಂಬ ಬಸವಣ್ಣನವರ ವಚನವಿದೆ. ಆದರೆ ನಾಯಿಯೊಂದು ತನ್ನ ಮರಿಗಳಿಗೆ ಹೊರತಾಗಿ ಇಟ್ಟುಕೊಂಡಿದ್ದ ಮೇಕೆ ಮರಿಗೆ ಹಾಲುಣಿಸುವ ಮೂಲಕ ಅಚ್ಚರಿಯ ಘಟನೆಗೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಘುನಾಪುರದ ಕೃಷ್ಣಪ್ರಸಾದ್ ರವರ ಮನೆ ನಾಯಿ ಮತ್ತು ಮೇಕೆ ಮರಿ ನಡುವಿನ ತಾಯಿ ಪ್ರೀತಿಗೆ ಸಾಕ್ಷಿಯಾಗಿದೆ. ಕೃಷ್ಣಪ್ರಸಾದ್ ಸಾಕಿಕೊಂಡಿರುವ ನಾಯಿ ಮೇಕೆ ಮರಿಗೆ ಹಾಲುಣಿಸುವ ಮೂಲಕ ಅಚ್ಚರಿಯ ತಾಯಿ ವಾತ್ಸಲ್ಯಕ್ಕೆ ಕಾರಣವಾಗಿದೆ. ಈ ನಾಯಿ 20 ದಿನಗಳ ಹಿಂದೆ ಎರಡು ನಾಯಿ ಮರಿಗಳಿಗೆ ಜನ್ಮ ನೀಡಿತ್ತು, ನೋಡಲು ಮುದ್ದಾಗಿದ ನಾಯಿ ಮರಿಗಳನ್ನ ಸಾಕುವ ಸಲುವಾಗಿ ಬೇರೆಯವರು ತೆಗೆದುಕೊಂಡು ಹೋಗಿದ್ರು, ಆದರೆ ನಾಯಿ ಮೊಲೆಯ ಹಾಲು ನಾಯಿಯ ಮೊಲೆಯಲ್ಲೇ ಉಳಿಯಿತು. ಅದೇ ಸಮಯಕ್ಕೆ ಕೃಷ್ಣ ಪ್ರಸಾದ್ ಮೇಕೆ ಯೊಂದು ಮರಿಗಳನ್ನ ಹಾಕಿತ್ತು. ತನ್ನ ನಾಯಿ ಮರಿಗಳಿಗೆ ಹಾಲುಣಿಸುವ ಅವಕಾಶ ಕಳೆದುಕೊಂಡಿದ್ದ ನಾಯಿ ಮೇಕೆ ಮರಿಗೆ ಹಾಲುಣಿಸುವ ಮೂಲಕ ತಾಯಿ ಸುಖವನ್ನ ಸಂತೋಷದಿಂದ ಅನುಭವಿಸುತ್ತಿದೆ.
ಕೃಷ್ಣಪ್ರಸಾದ್ ಕಾಶ್ಮಿರ ಮೂಲದ 30ಕ್ಕೂ ಹೆಚ್ಚು ಮೇಕೆಗಳನ್ನ ಸಾಕುತ್ತಿದ್ದಾರೆ, ಕೆಲವು ದಿನಗಳ ಹಿಂದೆ ಮೇಕೆಯೊಂದು ಮೇಕೆ ಮರಿಗಳಿಗೆ ಜನ್ಮ ನೀಡಿತ್ತು, ರಾತ್ರಿ ಕಳೆದು ಬೆಳಗಾಗುವುದ್ರೊಳಗೆ ಮೇಕೆ ಮರಿ ನಾಯಿಯ ಜೊತೆ ಮಲಗಿತ್ತು, ನಿತ್ಯ ಮೇಕೆ ಮರಿಗೆ ಹಾಲು ಕುಡಿಸುತ್ತಿದೆ, ಹತ್ತಿರ ಹೋದ್ರೆ ಬೊಗಳುತ್ತೆ, ಕಚ್ಚಲು ಸಹ ಮುಂದಾಗುತ್ತೆ, ಮೇಕೆ ಮರಿ ತನ್ನ ಅಸಲಿ ತಾಯಿ ಮೇಕೆ ಬಳಿ ಹೋಗಿ ಹಾಲು ಕುಡಿಯುತ್ತಿದ್ದಾರೆ, ಅಲ್ಲಿಗೆ ಹೋಗುವ ನಾಯಿ ಮೇಕೆ ಮರಿಯನ್ನ ತನ್ನ ಕಡೆ ಸೆಳೆದುಕೊಂಡು ಹಾಲುಣಿಸುತ್ತಿದೆ, ನಾಯಿ ತಾಯಿ ವಾತ್ಸಲ್ಯಕ್ಕೆ ಮನಸೋತ ಕೃಷ್ಣಪ್ರಸಾದ್ ಅವುಗಳ ಪಾಡಿಗೆ ಬಿಟ್ಟು ಬಿಟ್ಟಿದ್ದಾರೆ.