ನವದೆಹಲಿ:- ದೆಹಲಿಯ ಜಂಗ್ಪುರದಲ್ಲಿ ಕೈಕಾಲು ಕಟ್ಟಿಹಾಕಿದ ಸ್ಥಿತಿಯಲ್ಲಿ ವೈದ್ಯನ ಶವ ಪತ್ತೆಯಾದ ಘಟನೆ ಜರುಗಿದೆ.
63 ವರ್ಷದ ವೈದ್ಯ ಡಾ.ಯೋಗೇಶ್ ಚಂದ್ರ ಪಾಲ್ ಅವರ ದೇಹವು ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಸಂಜೆ 6:50ಕ್ಕೆ ಶವದ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಬಳಿಕ ತಂಡವೊಂದು ಮನೆಗೆ ಧಾವಿಸಿತ್ತು. ಜಂಗ್ಪುರ ಸಿ ಬ್ಲಾಕ್ನಲ್ಲಿರುವ ವಸತಿ ಕಟ್ಟಡದ ಮೊದಲ ಮಹಡಿಯಲ್ಲಿ ವೈದ್ಯ ಚಂದ್ರ ಪಾಲ್ ವಾಸವಾಗಿದ್ದರು. ಅವರ ಮನೆಯಲ್ಲಿ ದರೋಡೆಯಾಗಿರುವ ಬಗ್ಗೆ ಪೊಲೀಸರಿಗೆ ಕುರುಹು ಸಿಕ್ಕಿದೆ. ಆದರೆ ಸಂಪೂರ್ಣ ತನಿಖೆಯ ನಂತರ ತಿಳಿಯಲಿದೆ. ಕೊಲೆ ಮತ್ತು ದರೋಡೆಯಲ್ಲಿ ಮೂರ್ನಾಲ್ಕು ಜನರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಾಲ್ ಅವರ ಪತ್ನಿ ನೀನಾ ಕೂಡ ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ.